
ಕೂಡ್ಲಿಗಿ , 12 ನವೆಂಬರ್ (ಹಿ.ಸ.)
ಆ್ಯಂಕರ್ : ಕೇಂದ್ರ ಪುರಸ್ಕøತ ಅಮೃತ ಯೋಜನೆ ತಾಂತ್ರಿಕೇತರ ಕಾರ್ಯಕ್ರಮದಡಿ ಕೂಡ್ಲಿಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಒಟ್ಟು 7 ಉದ್ಯಾನವನಗಳನ್ನು ನಿರ್ವಹಣೆ ಮಾಡಲು ಡೇನಲ್ಮ್ ಅಭಿಯಾನದಡಿ ರಚಿತವಾದಂತ ಎಂಐಎಸ್ ನಲ್ಲಿ ನೊಂದಣಿಯಾಗಿರುವ ಅರ್ಹ ಮಹಿಳಾ ಸ್ವಸಹಾಯ ಸಂಘಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕೂಡ್ಲಿಗಿ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ತಿಳಿಸಿದ್ದಾರೆ.
ಡೇನಲ್ಮ್ ರಚಿತವಾದ ಆಸಕ್ತ ಮಹಿಳಾ ಸ್ವಸಹಾಯ ಸಂಘಗಳು ಪಟ್ಟಣ ಪಂಚಾಯಿತಿ ಕಾರ್ಯಾಲಯದ, ಡೇನಲ್ಮ್ ಶಾಖೆಗೆ ಭೇಟಿ ನೀಡಿ ಅರ್ಜಿ ಹಾಗೂ ನಮೂನೆಗಳನ್ನು ಪಡೆದು ನವೆಂಬರ್.25 ರೊಳಗಾಗಿ ಸೂಕ್ತ ದಾಖಲಾತಿಗಳೊಂದಿಗೆ ಅರ್ಜಿ ಭರ್ತಿಮಾಡಿ ಸಲ್ಲಿಸಬೇಕು. ಒಂದು ಸ್ವಸಹಾಯ ಸಂಘ ಒಂದು ಪಾರ್ಕ್ ಮಾತ್ರ ಅರ್ಜಿ ಸಲ್ಲಿಸಬಹುದು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್