
ಕೋಲಾರ, ೧೨ ನವಂಬರ್ (ಹಿ.ಸ.) :
ಆ್ಯಂಕರ್ : ಬಂಗಾರಪೇಟೆ ಕೃಷಿ ರೈತ ಉತ್ಪಾದಕ ಸಂಸ್ಥೆಯ ಷೇರುದಾರ ರೈತರಿಗೆ ಅನುಕೂಲವಾಗಲಿ ಎಂದು ಎಸ್.ಎಂ.ಸೆಹಗಲ್ ಫೌಂಡೇಶನ್ ಸಹಯೋಗದೊಂದಿಗೆ ಉಚಿತವಾಗಿ ಟೋಮೋಟ ಬೆಳೆಗೆ ಸಂಬಂಧಿಸಿದ ಕೃಷಿ ಸಾಮಗ್ರಿ ಮತ್ತು ಪರಿಕರಗಳನ್ನು ವಿತರಿಸಲಾಯಿತು.
ಮಲಚಿಂಗ್ ಪೇಪರ್, ಸ್ಪ್ರೇಯರ್, ಸಾವಯವ ಗೊಬ್ಬರಗಳು, ಮೈಕ್ರೋ ನ್ಯೂಟ್ರೀಯೆಂಟ್ ಗಳು, ಸೋಲಾರ್ ಟ್ರ್ಯಾಪ್ಗಳು, ಜಿಗುಟಾದ ಬಲೆಗಳು, ಟೈನ್, ತಂಗುಸಿ, ಗ್ರೀನ್ ವೈರ್ ಸೇರಿದಂತೆ ಒಟ್ಟು ೧೭ ರೀತಿಯ ವಿವಿಧ ಸಾಮಗ್ರಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ಅಧಿಕಾರಿ ನಾರಾಯಣ ರೆಡ್ಡಿ, ಸೆಹಗಲ್ ಫೌಂಡೇಶನ್ನ ನವ್ಯ, ಎಫ್ಪಿಓ ಅಧ್ಯಕ್ಷೆ ಮಂಜುಳಮ್ಮ, ಸಿಇಓ ರಾಜೇಶ್ವರಿ, ನಿರ್ದೇಶಕರುಗಳಾದ ವೆಂಕಟಾಚಲಪತಿ, ಸೋಮಶೇಖರ್ ರೆಡ್ಡಿ, ವೆಂಕಟೇಶ್ ರೆಡ್ಡಿ, ಕ್ಷೇತ್ರ ತಜ್ಞರಾದ ಗೋಪಾಲಪ್ಪ, ಎಲ್ಆರ್ಪಿ ಮಂಜುಳ ಸೇರಿದಂತೆ ಮತ್ತಿತರರು ಹಾಜರಿದ್ದರು.
ಚಿತ್ರ : ಬಂಗಾಪೇಟೆ ಕೃಷಿ ರೈತ ಉತ್ಪಾದಕ ಸಂಸ್ಥೆಯ ಷೇರುದಾರ ರೈತರಿಗೆ ಅನುಕೂಲವಾಗಲಿ ಎಂದು ಎಸ್.ಎಂ.ಸೆಹಗಲ್ ಪೌಂಡೇಶನ್ ಸಹಯೋಗದೊಂದಿಗೆ ಉಚಿತವಾಗಿ ಕೃಷಿ ಸಾಮಗ್ರಿ ಮತ್ತು ಪರಿಕರಗಳನ್ನು ವಿತರಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್