
ಮುಂಬಯಿ, 12 ನವೆಂಬರ್ (ಹಿ.ಸ.) :
ಆ್ಯಂಕರ್ : ಹಲವು ದಿನಗಳ ಆಸ್ಪತ್ರೆ ಚಿಕಿತ್ಸೆಯ ಬಳಿಕ, ಹಿರಿಯ ನಟ ಧರ್ಮೇಂದ್ರ ಅವರನ್ನು ಇಂದು ಬೆಳಿಗ್ಗೆ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಅವರನ್ನು ಆಂಬ್ಯುಲೆನ್ಸ್ ಮೂಲಕ ಮನೆಗೆ ಕರೆತರಲಾಗಿದ್ದು, ಅವರೊಂದಿಗೆ ಮಗ ಬಾಬಿ ಡಿಯೋಲ್ ಹಾಗೂ ಕುಟುಂಬದ ಇತರ ಸದಸ್ಯರು ಇದ್ದರು.
ಧರ್ಮೇಂದ್ರ ಅವರ ಚಿಕಿತ್ಸೆಯನ್ನು ಈಗಿನಿಂದ ಮನೆಯಲ್ಲೇ ಮುಂದುವರಿಸಲು ವೈದ್ಯರು ಹಾಗೂ ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆಸ್ಪತ್ರೆಯಿಂದ ಬಿಡುಗಡೆ ಸುದ್ದಿ ತಿಳಿದ ತಕ್ಷಣ ದೇಶದಾದ್ಯಂತ ಅಭಿಮಾನಿಗಳಲ್ಲಿ ಸಂತೋಷದ ಅಲೆ ಎದ್ದಿತು. ಪಂಜಾಬ್‌ನ ಸಹ್ನೇವಾಲ್ ಮೂಲದ ಧರ್ಮೇಂದ್ರ ಅವರಿಗಾಗಿ ಫಾಗ್ವಾರಾ ಸೇರಿದಂತೆ ಅನೇಕ ಸ್ಥಳಗಳ ದೇವಾಲಯಗಳು ಮತ್ತು ಗುರುದ್ವಾರಗಳಲ್ಲಿ ಪ್ರಾರ್ಥನೆಗಳು ನಡೆದಿದ್ದವು. ಈಗ ಅವರು ಮನೆಗೆ ಮರಳಿರುವುದರಿಂದ ಅಭಿಮಾನಿಗಳ ಮುಖದಲ್ಲಿ ನೆಮ್ಮದಿಯ ನಗು ಮೂಡಿದೆ.
ಧರ್ಮೇಂದ್ರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಮತ್ತು ಅವರ ಚಿಕಿತ್ಸೆ ಮನೆಯಲ್ಲೇ ಮುಂದುವರಿಯಲಿದೆ. ಯಾವುದೇ ವದಂತಿಗಳನ್ನು ಅಥವಾ ಊಹಾಪೋಹಗಳನ್ನು ಹರಡದಂತೆ ಮಾಧ್ಯಮಗಳು ಹಾಗೂ ಸಾರ್ವಜನಿಕರನ್ನು ನಾವು ವಿನಂತಿಸುತ್ತೇವೆ. ಧರ್ಮೇಂದ್ರ ಮತ್ತು ನಮ್ಮ ಕುಟುಂಬದ ಗೌಪ್ಯತೆಯನ್ನು ಗೌರವಿಸಿ. ಅವರ ಚೇತರಿಕೆಗಾಗಿ ಎಲ್ಲರ ಪ್ರಾರ್ಥನೆಗೆ ಹಾಗೂ ಪ್ರೀತಿಗೆ ಧನ್ಯವಾದಗಳು. ಧರ್ಮೇಂದ್ರ ಎಲ್ಲರನ್ನೂ ಹೃದಯಪೂರ್ವಕವಾಗಿ ಪ್ರೀತಿಸುತ್ತಾರೆ,” ಎಂದು ಕುಟುಂಬವು ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa