2026ರ ಫಿಫಾ ನನ್ನ ಕೊನೆ ವಿಶ್ವಕಪ್ : ಕ್ರಿಸ್ಟಿಯಾನೊ ರೊನಾಲ್ಡೊ
ರಿಯಾದ್, 12 ನವೆಂಬರ್ (ಹಿ.ಸ.) : ಆ್ಯಂಕರ್ : ಪೋರ್ಚುಗೀಸ್ ಫುಟ್ಬಾಲ್ ಕ್ರೀಡಾ ಪಟು ಕ್ರಿಸ್ಟಿಯಾನೊ ರೊನಾಲ್ಡೊ ಅವರು ಮುಂಬರುವ 2026ರ ಫಿಫಾ ವಿಶ್ವಕಪ್ ತಮ್ಮ ವೃತ್ತಿಜೀವನದ ಕೊನೆಯ ವಿಶ್ವಕಪ್ ಆಗಿರಲಿದೆ ಎಂದು ಮಂಗಳವಾರ ಘೋಷಿಸಿದರು. “ನನ್ನ ಶ್ರೇಷ್ಠ ಕ್ರೀಡಾ ಜೀವನ ಈಗ ಅಂತ್ಯದ ಹಂತದಲ್ಲಿದೆ,” ಎಂದು ಅವ
Ronaldo


ರಿಯಾದ್, 12 ನವೆಂಬರ್ (ಹಿ.ಸ.) :

ಆ್ಯಂಕರ್ : ಪೋರ್ಚುಗೀಸ್ ಫುಟ್ಬಾಲ್ ಕ್ರೀಡಾ ಪಟು ಕ್ರಿಸ್ಟಿಯಾನೊ ರೊನಾಲ್ಡೊ ಅವರು ಮುಂಬರುವ 2026ರ ಫಿಫಾ ವಿಶ್ವಕಪ್ ತಮ್ಮ ವೃತ್ತಿಜೀವನದ ಕೊನೆಯ ವಿಶ್ವಕಪ್ ಆಗಿರಲಿದೆ ಎಂದು ಮಂಗಳವಾರ ಘೋಷಿಸಿದರು. “ನನ್ನ ಶ್ರೇಷ್ಠ ಕ್ರೀಡಾ ಜೀವನ ಈಗ ಅಂತ್ಯದ ಹಂತದಲ್ಲಿದೆ,” ಎಂದು ಅವರು ಸ್ಪಷ್ಟಪಡಿಸಿದರು.

40 ವರ್ಷದ ರೊನಾಲ್ಡೊ ಕ್ಲಬ್ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ 950 ಕ್ಕೂ ಹೆಚ್ಚು ಗೋಲುಗಳನ್ನು ದಾಖಲಿಸಿದ್ದಾರೆ. 2026ರಲ್ಲಿ ನನಗೆ 41 ವರ್ಷ ವಯಸ್ಸಾಗುತ್ತದೆ. ಅದು ನಿವೃತ್ತಿಗೆ ಸೂಕ್ತ ಸಮಯ ಎಂದು ನಾನು ಭಾವಿಸುತ್ತೇನೆ,” ಎಂದು ಸೌದಿ ಅರೇಬಿಯಾದಲ್ಲಿ ನಡೆದ ವೇದಿಕೆಯಲ್ಲಿ ವೀಡಿಯೋ ಲಿಂಕ್ ಮುಖಾಂತರ ಮಾತನಾಡಿದ ಅವರು ಹೇಳಿದರು.

ರೊನಾಲ್ಡೊ ಪ್ರಸ್ತುತ ಸೌದಿ ಅರೇಬಿಯಾದ ಅಲ್-ನಾಸರ್ ಕ್ಲಬ್ ಪರ ಆಡುತ್ತಿದ್ದಾರೆ. 2023ರಲ್ಲಿ ಕ್ಲಬ್ ಸೇರಿದ ಅವರು, ಅದಾಗಲೇ “ಶೀಘ್ರದಲ್ಲೇ ನಿವೃತ್ತಿ” ಎಂದು ಹೇಳಿದ್ದರು. ಈ ಬಾರಿ ಅವರು ಸ್ಪಷ್ಟಪಡಿಸಿದ್ದು, ನಾನು ‘ಶೀಘ್ರದಲ್ಲೇ’ ಎಂದಾಗ ಅದು ಒಂದು ಅಥವಾ ಎರಡು ವರ್ಷಗಳ ಒಳಗೆ ಎಂದರ್ಥ. ನಾನು ಇನ್ನೂ ಆಡುತ್ತೇನೆ, ಆದರೆ ಹೆಚ್ಚು ಕಾಲ ಅಲ್ಲ,” ಎಂದು ಹೇಳಿದ್ದಾರೆ.

ಐದು ಬಾರಿ ಬ್ಯಾಲನ್ ಡಿ’ಓರ್ ಪ್ರಶಸ್ತಿ ವಿಜೇತ ರೊನಾಲ್ಡೊ, 2026ರಲ್ಲಿ ತಮ್ಮ ಆರನೇ ವಿಶ್ವಕಪ್ ಆಡುವ ಗುರಿ ಹೊಂದಿದ್ದಾರೆ. 2006ರ ವಿಶ್ವಕಪ್‌ನಲ್ಲಿ ಪೋರ್ಚುಗಲ್ ಸೆಮಿಫೈನಲ್‌ನಲ್ಲಿ ಫ್ರಾನ್ಸ್ ವಿರುದ್ಧ ಸೋತಿದ್ದಾಗ ಅವರ ಅತ್ಯುತ್ತಮ ಪ್ರದರ್ಶನ ದಾಖಲಾಗಿತ್ತು.

ಪೋರ್ಚುಗಲ್ ತಂಡ ಇನ್ನೂ 2026ರ ವಿಶ್ವಕಪ್‌ಗೆ ಅರ್ಹತೆ ಪಡೆಯಬೇಕಿದೆ. ಗುರುವಾರ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಅರ್ಹತೆ ಖಚಿತವಾಗಲಿದೆ.

ರೊನಾಲ್ಡೊ 2022ರಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ತಂಡವನ್ನು ತೊರೆದು ಅಲ್-ನಾಸರ್‌ಗೆ ಸೇರಿದರು. ಅವರ ನಂತರ ಅನೇಕ ಅಂತರರಾಷ್ಟ್ರೀಯ ತಾರೆಯರು ಸೌದಿ ಕ್ಲಬ್‌ಗಳನ್ನು ಸೇರಿದರು. ಇತ್ತೀಚಿನ ವರ್ಷಗಳಲ್ಲಿ ಸೌದಿ ಅರೇಬಿಯಾ ಕ್ರೀಡೆ ಮತ್ತು ಮನರಂಜನಾ ಕ್ಷೇತ್ರದಲ್ಲಿ ಭಾರೀ ಹೂಡಿಕೆ ಮಾಡುತ್ತಿದ್ದು, 2034ರ ಫಿಫಾ ವಿಶ್ವಕಪ್ ಆತಿಥ್ಯ ಹಕ್ಕನ್ನು ಕೂಡ ಪಡೆದಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande