2025-26ರ ಹಿಂಗಾರು ಬೆಳೆ ವಿಮೆಜಾರಿ
ಗದಗ, 12 ನವೆಂಬರ್ (ಹಿ.ಸ.) ಆ್ಯಂಕರ್: 2025-26ರ ಹಿಂಗಾರು ಹಾಗೂ ಬೇಸಿಗೆ ಹಂಗಾಮಿಗಾಗಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ರೈತರು ಅಧಿಸೂಚಿತ ಬೆಳೆಗಳಿಗೆ ನೋಂದಣಿ ಮಾಡಿಸಲು ಸರಕಾರವು ಅಧಿಸೂಚನೆಯನ್ನು ಹೊರಡಿಸಿರುತ್ತದೆ. ಅಧಿಸೂಚಿತ ಬೆಳೆಗೆ ಬೆಳೆಸಾಲ ಪಡೆದರೈತರಿಗೆ ಈ
ಫೋಟೋ


ಗದಗ, 12 ನವೆಂಬರ್ (ಹಿ.ಸ.)

ಆ್ಯಂಕರ್:

2025-26ರ ಹಿಂಗಾರು ಹಾಗೂ ಬೇಸಿಗೆ ಹಂಗಾಮಿಗಾಗಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ರೈತರು ಅಧಿಸೂಚಿತ ಬೆಳೆಗಳಿಗೆ ನೋಂದಣಿ ಮಾಡಿಸಲು ಸರಕಾರವು ಅಧಿಸೂಚನೆಯನ್ನು ಹೊರಡಿಸಿರುತ್ತದೆ.

ಅಧಿಸೂಚಿತ ಬೆಳೆಗೆ ಬೆಳೆಸಾಲ ಪಡೆದರೈತರಿಗೆ ಈ ಯೋಜನೆಯು ಕಡ್ಡಾಯವಾಗಿದ್ದು, ಒಂದು ವೇಳೆ ಬೆಳೆಸಾಲ ಪಡೆದರೈತರು ಸದರಿಯೋಜನೆಯಡಿ ಭಾಗವಹಿಸಲು ಇಚ್ಛೆ ಪಡದೆ ಇದ್ದಲ್ಲಿ, ಈ ಕುರಿತು ಬೆಳೆಸಾಲ ಪಡೆದ ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆವಿಮೆ ನೋಂದಣ ಅಂತಿಮ ದಿನಾಂಕದಿಂದ ಏಳು ದಿನಕ್ಕಿಂತ ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಿದಲ್ಲಿ ಅಂತಹ ರೈತರನ್ನು ಬೆಳೆವಿಮೆ ಯೋಜನೆಯಿಂದ ಕೈಬಿಡಲಾಗುವುದು. ಬೆಳೆಸಾಲ ಪಡೆಯದರೈತರಿಗೆ ಬೆಳೆವಿಮೆ ಯೋಜನೆಯು ಐಚ್ಛಿಕವಾಗಿರುತ್ತದೆ.

ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ ಓರಿಯಂಟಲ್ ಜನರಲ್ ಇನ್ಯೂರನ್ಸ್ಕಂ. ಲಿ. ಅನುಷ್ಠಾನ ವಿಮಾ ಸಂಸ್ಥೆಯಾಗಿ ಆಯ್ಕೆಯಾಗಿರುತ್ತದೆ. ಆಸಕ್ತ ರೈತರು ಬೆಳೆವಿಮೆ ತುಂಬಲು ಕೊನೆಯ ದಿನಾಂಕದವರೆಗೆ ಕಾಯದೇ ಮುಂಚಿತವಾಗಿ ಬೆಳೆ ವಿಮೆತುಂಬಲು ಜಂಟಿಕೃಷಿ ನಿರ್ದೇಶಕರು ತಿಳಿಸಿರುತ್ತಾರೆ. ಬೆಳೆ ವಿಮೆ ಮಾಡಿಸುವ ರೈತರು ಎಫ್ಐಡಿ ಹೊಂದಿರುವುದು ಕಡ್ಡಾಯವಾಗಿರುತ್ತದೆ.

ರೈತರು ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ, ಖಾತೆ ಪುಸ್ತಕ ,ಕಂದಾಯ ರಶೀದಿಯನ್ನು ಸಂಬಂಧಿಸಿದ ಬ್ಯಾಂಕ, ಹತ್ತಿರದ ಸಾರ್ವಜನಿಕ ಸೇವಾಕೇಂದ್ರ ಗ್ರಾಮ ಒನ್ ಕೇಂದ್ರಗಳಲ್ಲಿ ನೀಡಿ ಸಂರಕ್ಷಣೆ ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ,ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಸಂಬಂಧಿಸಿದ ವಿಮಾ ಸಂಸ್ಥೆಯ ಗದಗ ಶಾಖೆಯನ್ನು ಸಂಪರ್ಕಿಸಲುತಿಳಿಸಿದೆ.

ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂಕುಸಿತ, ಬೆಳೆ ಮುಳುಗಡೆ, ಮೇಘಸ್ಫೋಟ, ಗುಡುಗು ಮಿಂಚು ಹಾಗೂ ಬೆಂಕಿ ಅವಗಡಗಳಿಂದ ಉಂಟಾಗುವ ಬೆಳೆನಷ್ಟದ ನಿರ್ಧಾರವನ್ನು ವ್ಯಯಕ್ತಿಕವಾಗಿ ನಿರ್ಧರಿಸಿ ವಿಮಾ ನಷ್ಟ ಪರಿಹಾರವನ್ನು ಇತ್ಯರ್ಥ ಪಡಿಸಲು ಯೋಜನೆಯಡಿ ಅವಕಾಶನೀಡಲಾಗಿದೆ. ಇಂತಹ ಸ್ಥಳೀಯ ಗಂಡಾಂತರಕಾರಣಗಳಿಂದ ಬೆಳೆ ನಷ್ಟ ಸಂಭವಿಸಿದರೆ, ಬೆಳ ವಿಮೆ ಮಾಡಿಸಿರುವ ರೈತರು ಈ ಬಗ್ಗೆ ನೇರವಾಗಿ ಸಂಬಂಧಪಟ್ಟ ಅನುಷ್ಠಾಗೊಳಿಸುವ ವಿಮಾ ಸಂಸ್ಥೆಗಳ ಕಛೇರಿಗಳಿಗೆ ನೇರವಾಗಿ ಅಥವಾ ಬ್ಯಾಂಕ್/ ಕೃಷಿ/ತೋಟಗಾರಿಕೆ ಇಲಾಖೆ ಮುಖಾಂತರ 72 ಗಂಟೆಗಳೊಳಗಾಗಿ ಲಿಖಿತವಾಗಿ ಅಥವಾ ವಿಮಾ ಸಂಸ್ಥೆಯ ಉಚಿತ ದೂರವಾಣಿ ಸಂಖ್ಯೆಗೆಕರೆ ಮಾಡಿ ಸೂಚನೆ ನೀಡತಕ್ಕದ್ದು ಹಾಗೂಒಂದು ವೇಳೆ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲಿ ಒಣಗಳು ಬಿಟ್ಟಂತಹ ಸಂದರ್ಭದಲ್ಲಿ ಚಂಡಮಾರುತ ಅಥವಾ ಅಕಾಲಿಕ ಮಳೆಯಿಂದ ಬೆಳೆ ನಾಶವಾದರೆ ವ್ಯಯಕ್ತಿಕವಾಗಿ ವಿಮಾ ಸಂಸ್ಥೆಯು ನಷ್ಟ ನಿರ್ಧಾರ ಮಾಡಿ ವಿಮಾ ಪರಿಹಾರವನ್ನು ಇತ್ಯರ್ಥಪಡಿಸಲು ಸಹ ಅವಕಾಶಕಲ್ಪಿಸಲಾಗಿದೆ.

ಅರ್ಜಿ ಸಲ್ಲಿಸುವರೈತರಿಗೆ ಸೂಚನೆಗಳು: ರೈತರು ತಮ್ಮ ಜಮೀನಿನಲ್ಲಿ ಬಿತ್ತಿದ ಬೆಳೆಯನ್ನು ಮಾತ್ರ ಅರ್ಜಿಯಲ್ಲಿ ನಮೂದಿಸಬೇಕು. ರೈತರು ಸ್ವತಃ ತಾವೇ ಖುದ್ದಾಗಿ ಬೇಟಿ ನೀಡಿ ಅರ್ಜಿ ಸಲ್ಲಿಸಬೇಕು, ಒಂದು ವೇಳೆ ಭೂ ಮಾಲಿಕರ ಕುಟುಂಬದ ಇತರೆ ಸದಸ್ಯರು ಬೆಳೆ ವಿಮೆಗೆ ನೋಂದಣಿ ಮಾಡುವದು ಇದ್ದಲ್ಲಿ ಭೂ ಮಾಲಿಕರಿಂದ ನಿರಕ್ಷೇಪಣಾ ಪತ್ರ ಮತ್ತು ಮೂಲ ಆಧಾರ ಪ್ರತಿಯನ್ನು ಸಲ್ಲಿಸಬೇಕು. ಬಿತ್ತಿದ ಬೆಳೆಯು ಮಳೆ ಆಶ್ರಿತವೋ ಅಥವಾ ನೀರಾವರಿ ಬೆಳೆಯೋ ಎಂಬುದನ್ನು ಸ್ಪಷ್ಟವಾಗಿ ನಮೂದಿಸಬೇಕು, ಬಿತ್ತಿದ ಬೆಳೆಯು 30 ದಿನಗಳದ್ದಾಗಿರಬೇಕು, ಹಾಗೂ ಸಧೃಡವಾಗಿರಬೇಕು ಮತ್ತು ಬಿತ್ತನೆ ಮಾಡಿದ ಬೆಳೆಯಕುರಿತು ಸ್ವಯಂಧೃಡೀಕರಣ ನೀಡಬೇಕು, ಬೆಳೆ ಸಮೀಕ್ಷೆ ಕಡ್ಡಾಯ ವಾಗಿರುವದರಿಂದ ಬಿತ್ತದೆ ಇರುವ ಬೆಳೆಯನ್ನು ವಿಮೆ ಮಾಡಿಸಿದಲ್ಲಿ ಬೆಳೆ ವಿಮೆ ಪರಿಹಾರ ಪಡೆಯಲು ಅರ್ಹವಾಗುವದಿಲ್ಲ.

ತಾಲೂಕು ಪ್ರತಿನಿಧಿಗಳು: ಗದಗ : ಉಮೇಶ ಹುಬ್ಬಳ್ಳಿ, ಮೋ. ಸಂಖ್ಯೆ: 94820 61344 ಗಜೇಂದ್ರಗಡ: ಫಕಿರಸಾಬ, ಮೋ. ಸಂಖ್ಯೆ: 91640 98169 ಲಕ್ಷ್ಮೇಶ್ವರ: ಶಂಕರಗೌಡ ಪಾಟೀಲ, ಮೋ. ಸಂಖ್ಯೆ: 95919 10078 ಮುಂಡರಗಿ: ಶ್ರೀಕನಕಕುಮಾರ ಬೆಲ್ಲದ, ಮೋ. ಸಂಖ್ಯೆ: 96112 67933 ನರಗುಂದ: ಕರಿಯಪ್ಪ ಹೀರೆಕುರುಬರ, ಮೋ. ಸಂಖ್ಯೆ: 97426 03652 ರೋಣ: ಮಂಜುನಾಥಚಟ್ಟಿ, ಮೋ. ಸಂಖ್ಯೆ: 96113 17070 ಶಿರಹಟ್ಟಿ: ಮಂಜುನಾಥ ಇಳಿಗೇರ, ಮೋ. ಸಂಖ್ಯೆ: 77602 94391

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande