अंतरराष्ट्रीय

Blog single photo

ಪ್ರಯಾಣಿಕರು ತಮ್ಮೊಂದಿಗೆ 40 ಕೆ.ಜಿ. ಲಗೇಜ್ ಮಾತ್ರ ಒಯ್ಯಬಹುದು - ಏರ್ ಇಂಡಿಯಾ

17/07/2019


ದುಬೈ, ಜು.17 (ಹಿ.ಸ) - ಪ್ರತಿಷ್ಠಿತ ಏರ್‌ ಇಂಡಿಯಾ ಮೂಲಕ ಯುಎಇಗೆ ತೆರಳುವವರಿಗೆ 40 ಕಿಲೋಗ್ರಾಮ್ ಲಗೇಜ್‌ ಮಾತ್ರ ಒಯ್ಯುಲು ಅವಕಾಶ ನೀಡಲಾಗಿದೆ. ಅಂದರೆ, ಹಾಲಿ ಇರುವ ಚೆಕ್‌-ಇನ್‌ ಲಗೇಜ್‌ ಮಿತಿಯನ್ನು 10 ಕೆ.ಜಿ.ಗೆ ಹೆಚ್ಚಿಸಲಾಗಿದ್ದ ಪರಿಣಾಮ ಲಗೇಜು ಮಿತಿಯನ್ನು 30 ರಿಂದ 40 ಕೆ.ಜಿ.ಗೆ ಏರಿಕೆಯಾಗಿದೆ. ಕೂಡಲೇ ಈ ವ್ಯವಸ್ಥೆ ಜಾರಿಗೆ ಬಂದಿದೆ ಎಂದು ಏರ್‌ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶ್ವಾನಿ ಲೊಹಾನಿ ತಿಳಿಸಿದ್ದಾರೆ. ಭಾರತೀಯ ಪ್ರಯಾಣಿಕರ ಬಹು ದಿನಗಳ ಬೇಡಿಕೆ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ದುಬೈನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಲೊಹಾನಿ ಈ ವಿಚಾರ ತಿಳಿಸಿದ್ದಾರೆ. ಹ್ಯಾಂಡ್‌ ಬ್ಯಾಗೇಜ್‌ (ಕೈ ಚೀಲ) ಮಿತಿ ಈಗಿರುವಷ್ಟೇ ಅಂದರೆ 7 ಕೆ.ಜಿ.ಯೇ ಇರಲಿದೆ ಎಂದು ಹೇಳಿದ್ದಾರೆ. 


 
Top