मनोरंजन

Blog single photo

ಯುವ ನಟ,ನಿರ್ಮಾಪಕ‌ ಡಾ. ಡಿ.ಎಸ್ ಮಂಜುನಾಥ್ ‌ಕೋವಿಡ್ ಗೆ ಬಲಿ

18/04/2021

ಬೆಂಗಳೂರು, ಏ.18 : ಯುವ ನಟ,ನಿರ್ಮಾಪಕ‌ ಡಾ. ಡಿ.ಎಸ್ ಮಂಜುನಾಥ್ ‌ಕೋವಿಡ್ ಗೆ ಬಲಿಯಾಗಿದ್ದಾರೆ. ಕೆಮಿಸ್ಟ್ರಿ ಆಫ್ ಕರಿಯಪ್ಪ, ಸಂಯುಕ್ತ -2 ಮತ್ತು ಈಗ 0%ಲವ್ ಸಿನಿಮಾಗಳನ್ನು ನಿರ್ಮಿಸಿ ನಟಿಸಿದ್ದ ಡಾ. ಡಿ.ಎಸ್. ಮಂಜುನಾಥ್‌ ಕೊರೋನಾ ಸೋಂಕಿನಿಂದ ನಿಧನರಾಗಿದ್ದಾರೆ.

ಇದೀಗ % ಪರ್ಸೆಂಟ್ ಚಿತ್ರದಲ್ಲಿ ನಾಯಕರಾಗಿ‌ನಟಿಸಿದ್ದರು. ಚಿತ್ರ ತೆರೆಗೆ ಬರುವ ಮುನ್ನವೇ ಕೋವಿಡ್ ಸೋಂಕಿನಿಂದ ನಿಧನರಾಗಿದ್ದಾರೆ.

ಸಂತಾಪ: ನಟ‌,ನಿರ್ಮಾಪಕ ಡಿ.ಎಸ್ ಮಂಜುನಾಥ್ ನಿಧನಕ್ಕೆ ಚಿತ್ರರಂಗದ ಹಲವು ಗಣ್ಯರು,ಸ್ನೇಹಿತರು ,ನಿರ್ಮಾಪಕ ರ ಸಂಘ ಮತ್ತು ಕಲಾವಿದರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.


 
Top