विदेश

Blog single photo

ಸ್ಪುಟ್ನಿಕ್ ಲಸಿಕೆ ಮುಂದಿನ ವಾರ ಭಾರತದಲ್ಲಿ ಲಭ್ಯ

13/05/2021

ನವದೆಹಲಿ,ಮೇ 13 : ಮಾರಣಾಂತಿಕ‌ ಕೊರೊನಾ ವಿರುದ್ಧ ಹೋರಾಡುವ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ಮುಂದಿನ ವಾರದಿಂದ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ಕೊರೊನಾ ವಿರುದ್ಧದ ರಷ್ಯಾದ 'ಸ್ಪುಟ್ನಿಕ್ ವಿ ಭಾರತಕ್ಕೆ ಬಂದಿದ್ದು ಮುಂದಿನ ವಾರದಿಂದ  ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ ಎಂದು ಕೇಂದ್ರ ಸರ್ಕಾರದ ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪೌಲ್‌ ತಿಳಿಸಿದ್ದಾರೆ.

ಸ್ಪುಟ್ನಿಕ್ ವಿ ಭಾರತಕ್ಕೆ ಬಂದಿದ್ದು ಮುಂದಿನ ವಾರದಿಂದ  ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ ಎಂದು ಹೇಳಲು ನನಗೆ ಸಂತಸವಾಗುತ್ತಿದೆ ಎಂದರು.

ಇದು ರಷ್ಯಾದಿಂದ ಸೀಮಿತವಾಗಿ ಪೂರೈಕೆಯಾಗಿರುವ ಲಸಿಕೆಯಾಗಿದೆ. ಸ್ಪುಟ್ನಿಕ್ ವಿ ಮಾರಾಟವು ಮುಂದಿನ ವಾರ ಆರಂಭವಾಗಲಿದೆ' ಎಂದು ತಿಳಿಸಿದ್ದಾರೆ.

‘ರಷ್ಯಾ ತಯಾರಿಸಿರುವ ಸ್ಪುಟ್ನಿಕ್ ವಿ ಲಸಿಕೆಯ ಎರಡು ಡೋಸ್‌ಗಳು ಕೋವಿಡ್ ವಿರುದ್ಧ ಶೇ 91.6ರಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ’ ಎಂದು ‘ದಿ ಲ್ಯಾನ್ಸೆಟ್‌’ ಪತ್ರಿಕಾ ವರದಿಯು ತಿಳಿಸಿದೆ.

ಭಾರತದಲ್ಲಿ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳ ಕೊರತೆಯ ಕಾರಣಕ್ಕಾಗಿ, ಸ್ಪುಟ್ನಿಕ್ ವಿ ಲಸಿಕೆಯನ್ನು ದೇಶದಲ್ಲಿ ತುರ್ತು ಬಳಕೆಗಾಗಿ ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ ಅವರು ಕಳೆದ ತಿಂಗಳು ಅನುಮೋದನೆ ನೀಡಿದ್ದಾರೆ.

ಈ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ರಷ್ಯಾದ ನೇರ ಹೂಡಿಕೆ ನಿಧಿಯೊಂದಿಗೆ ಸೆಪ್ಟೆಂಬರ್‌ನಲ್ಲಿಯೇ ಡಿಆರ್‌ಎಲ್ ಒಪ್ಪಂದ ಮಾಡಿಕೊಂಡಿತ್ತು. ಡಿಆರ್‌ಎಲ್ ಇನ್ನು ಕೆಲವೇ ತಿಂಗಳುಗಳಲ್ಲಿ ಈ ಲಸಿಕೆಯನ್ನು ಭಾರತದೊಳಗೇ ಉತ್ಪಾದಿಸಿ ಮಾರಾಟ ಮಾಡಲಿದೆ. ಸ್ಪುಟ್ನಿಕ್ ಲಸಿಕೆಯನ್ನು ಮೈನಸ್ 18ರಿಂದ ಮೈನಸ್ 22 ಡಿಗ್ರಿ ತಾಪಮಾನದಲ್ಲಿ ಸಂಗ್ರಹಿಸಿಡಲಾಗುತ್ತದೆ.


 
Top