ट्रेंडिंग

Blog single photo

ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಎಸಿ ಪೃಸನ್ನ ಕುಮಾರ್ ಸಾವು

04/05/2021

ಚಿತ್ರದುರ್ಗ,ಮೇ 04(ಹಿ.ಸ) : ನಿನ್ನೆ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಎಸಿ ಪ್ರಸನ್ನ ಅವರು ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಸಿಎಂ ಆರ್ ಆಸ್ಟರ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. 


ನಿನ್ನೆ ಬೆಳಗಿನ ಸಮಯದಲ್ಲಿ ವಾಕಿಂಗ್ ಗೆ ತೆರಳಿದ್ದ ಚಿತ್ರದುರ್ಗದ ಉಪವಿಭಾಗಾಧಿಕಾರಿ ಪ್ರಸನ್ನ ಅವರಿಗೆ ಬೈಕ್ ಡಿಕ್ಕಿ ಹೊಡೆದಿತ್ತು. ಇದರ ಪರಿಣಾಮ ತೀವ್ರತರವಾಗಿ ತಲೆಗೆ ಗಾಯವಾಗಿದ್ದು ಬಸವೇಶ್ವರ ಆಸ್ಪತ್ರೆಗೆ ದಾಖಲಾಗಿದ್ದರು. 

ಹೆಚ್ಚಿನ ಚಿಕಿತ್ಸೆ ಗಾಗಿ ಬೆಂಗಳೂರಿನ ಸಿಎಂ ಆರ್ ಅಸ್ಟ್ರ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಅವರು ಪತ್ನಿ ಇಬ್ಬರು ಪುತ್ರಿಯರು, ತಂದೆ ತಾಯಿ ಸಹೋದರರು ಹಾಗೂ ಸಹೋದರಿಯರನ್ನು ಆಗಲಿದ್ದಾರೆ. 

ಹಿಂದೂಸ್ತಾನ್ ಸಮಾಚಾರ್/ಪ್ರಬಿ/ಎಂವೈ 
Top