अंतरराष्ट्रीय

Blog single photo

ದೇಶದ ಇತರೆ ಜನರಿಗೆ ನೀಡುವ ಹಕ್ಕುಗಳನ್ನು ಕಾಶ್ಮೀರಿಗರಿಗೂ ನೀಡಿ - ಅಮೆರಿಕ

08/10/2019


ವಾಷಿಂಗ್ಟನ್, ಅ.08 (ಹಿ.ಸ) -  ಜನಜೀವನದ ಮೇಲೆ ಪರಿಣಾಮ ಬೀರುವುದರಿಂದ ಈಗಾಗಲೇ ಕಾಶ್ಮೀರದಲ್ಲಿ ಹೇರಲಾಗಿರುವ ಸಂವಹನ ನಿಷೇಧ ತೆರವುಗೊಳಿಸುವಂತೆ ಅಮೆರಿಕದ ವಿದೇಶಾಂಗ ವ್ಯವಹಾರಗಳ ಸಮಿತಿ ಭಾರತ ಸರ್ಕಾರವನ್ನು ಒತ್ತಾಯಿಸಿದೆ. 
ಕಾಶ್ಮೀರದಲ್ಲಿ ಸಂವಹನ ಮತ್ತು ಸಂಪರ್ಕ ಸಾಧನಗಳ ಸೇವೆ ಕಡಿತಗೊಳಿಸಿರುವುದರಿಂದ  ಜನರ ದಿನನಿತ್ಯದ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಕಾಶ್ಮೀರಿಗಳ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಮಿತಿ ಸದನ ಟ್ವೀಟ್ ಮಾಡಿದೆ. ಜಮ್ಮು-ಕಾಶ್ಮೀರದ ಮೇಲೆ ಹೇರಲಾಗಿರುವ ಮೂಲಭೂತ ಸೌಕರ್ಯಗಳ ನಿರ್ಬಂಧವನ್ನು ತೆಗೆದುಹಾಕಿ ಭಾರತದ ಬೇರೆ ಪ್ರದೇಶಗಳ ಜನರಿಗೆ ದೊರೆಯುವ ಹಕ್ಕುಗಳನ್ನು ಕಾಶ್ಮೀರಿಗರಿಗೂ ನೀಡುವ ಮೂಲಕ ಅವರ ಕೂಡ ದೇಶದ ಹಕ್ಕಗಳಿಗೆ ಸಮಾನ ಪಾಲುದಾರರು ಎಂದು ತೋರಿಸಲು ಇದು ಸೂಕ್ತ ಸಮಯ ಎಂದು ಅಮೆರಿಕ ಹೇಳಿದೆ. ಕಳೆದ ಆಗಸ್ಟ್ 5ರಂದು ಕೇಂದ್ರ ಸರ್ಕಾರ ಸಂವಿಧಾನ ವಿಧಿ 370 ರದ್ದುಪಡಿಸಿ ಜಮ್ಮು-ಕಾಶ್ಮೀರ ಇಬ್ಭಾಗ ಮಾಡಿ ಅದು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳು ಎಂದು ಘೋಷಣೆ ಮಾಡಿದ ನಂತರ ಇಲ್ಲಿ ನಿಷೇಧ ಹೇರಲಾಗಿದೆ.  ಜಮ್ಮು-ಕಾಶ್ಮೀರಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮ ಸಂಪೂರ್ಣವಾಗಿ ಭಾರತದ ಆಂತರಿಕ ವಿಷಯವಾಗಿದ್ದು, ಪಾಕಿಸ್ತಾನ ಕಡೆಯಿಂದ ಭಯೋತ್ಪಾದಕರ ತೊಂದರೆ, ಕಿರುಕುಳವನ್ನು ತಪ್ಪಿಸಲು ಇದು ಅನಿವಾರ್ಯವಾಗಿತ್ತು ಎಂದು ಭಾರತ ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡು ಬಂದಿದೆ. ವಿದೇಶಾಂಗ ವ್ಯವಹಾರಗಳ ಸಮಿತಿಯ ಏಷ್ಯಾ-ಪೆಸಿಫಿಕ್ ಮತ್ತು ಪ್ರಸರಣ ರಹಿತ ಉಪಸಮಿತಿ ಅಕ್ಟೋಬರ್ 22 ರಂದು ಕಾಶ್ಮೀರ ಮತ್ತು ದಕ್ಷಿಣ ಏಷ್ಯಾದ ಇತರೆ ಭಾಗಗಳಲ್ಲಿ ಮಾನವ ಹಕ್ಕುಗಳಿಗೆ ಸಂಬಂಧಿಸಿದ ವಿಚಾರಣೆಯನ್ನು ನಿಗದಿಪಡಿಸಿದೆ.


 
Top