मनोरंजन

Blog single photo

ಬಿಡುವಿಲ್ಲದ ಸ್ಯಾಂಡಲ್ ವುಡ್ ನಟಿ ಅದಿತಿ ಪ್ರಭುದೇವ

30/09/2019


ಬೆಂಗಳೂರು, ಸೆ.30 (ಹಿ.ಸ) - ಸ್ಯಾಂಡಲ್ ವುಡ್ ನಟಿ ಅದಿತಿ ಪ್ರಭುದೇವ ಸದ್ಯದ ಮಟ್ಟಿಗೆ ಗಾಂಧಿನಗರಿಗರ ಹಾಟ್‌ ಫೇವರೇಟ್‌.  ಬೆರಳೆಣಿಕೆ ವರ್ಷದಲ್ಲೇ ಈ ನಟಿ ಸಾಲು ಸಾಲು ಚಿತ್ರಗಳಲ್ಲಿ ನಟಿಸುವ ಮೂಲಕ ಬಿಜಿ ನಟಿ ಎನಿಸಿಕೊಂಡಿದ್ದಾರೆ. ಎಷ್ಟರಮಟ್ಟಿಗೆ ಅಂದರೆ, ಕೇವಲ ಎರಡೇ ವರ್ಷದಲ್ಲಿ 12 ಚಿತ್ರಗಳಲ್ಲಿ ಅವಕಾಶ ಪಡೆದಿರುವುದು. ಸಾಮಾನ್ಯವಾಗಿ ನಟಿಯರು ವರ್ಷಕ್ಕೆ ಒಂದು ಅಥವಾ ಎರಡು ಹೆಚ್ಚೆಂದರೆ, ಮೂರು ಚಿತ್ರಗಳಲ್ಲಿ ನಟಿಸಬಹುದು. ಆದರೆ, ಅದಿತಿ ಮಾತ್ರ ವರ್ಷಕ್ಕೆ ನಾಲ್ಕು, ಐದು ಚಿತ್ರಗಳಲ್ಲಿ ನಟಿಸುವ ಮೂಲಕ ಮೆಲ್ಲನೆ ಗಾಂಧಿನಗರದಲ್ಲಿ ಗಟ್ಟಿನೆಲೆ ಕಾಣುವ ಮುನ್ಸೂಚನೆ ನೀಡಿದ್ದಾರೆ.  ಹಾಗೆ ನೋಡಿದರೆ, ಅದಿತಿ ಅದೃಷ್ಟದ ನಟಿ ಎಂದೇ ಹೇಳಬಹುದು.  ತನ್ನ ಮೊದಲ ಚಿತ್ರದಲ್ಲೇ ಅಜೇಯ್‌ರಾವ್‌ ಜೊತೆಗೆ ತೆರೆ ಹಂಚಿಕೊಂಡರು. ಧೈರ್ಯಂ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಅದಿತಿ, ಅಲ್ಲಿಂದ ಹಿಂದಿರುಗಿ ನೋಡದೆ, ಸಾಲು ಸಾಲು ಚಿತ್ರಗಳಲ್ಲಿ ಬಿಜಿಯಾದರು.


 
Top