ट्रेंडिंग

Blog single photo

ಯುವ ಜನಾಂಗ ಸೇವಾ ಮನೋಭಾವದಿಂದ ಸ್ಕೌಟ್ಸ್ ಶಿಬಿರಗಳಲ್ಲಿ ಭಾಗವಹಿಸಲು ಕರೆ

02/12/2019

ಯುವ ಜನಾಂಗ ಸೇವಾ ಮನೋಭಾವದಿಂದ ಸ್ಕೌಟ್ಸ್ ಶಿಬಿರಗಳಲ್ಲಿ ಭಾಗವಹಿಸಲು ಕರೆ

ಕೋಲಾರ ಡಿ.2(ಹಿ.ಸ) : ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಸ್ಕೌಟ್ಸ್ –ಗೈಡ್ಸ್ ಶಿಕ್ಷಣ ಪೂರಕವಾಗಿದ್ದು  ಸೇವಾ ಮನೋಭಾವದಿಂದ  ಶಿಬಿರಗಳಲ್ಲಿ  ಯುವ ಜನಾಂಗ ತೊಡಗಿಸಿಕೊಳ್ಳÀಬೇಕು ಎಂದು  ಮಾಲೂರು ಸರ್ಕಾರಿ ಬಾಲಕರ  ಪದವಿ ಪೂರ್ವ ಕಾಲೇಜಿನ  ಪ್ರಾಂಶುಪಾಲ ರವಿ ಕುಮಾರ್ ತಿಳಿಸಿದರು.
ಮಾಲೂರು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಆಯೋಜಿಸಿರುವ ವಿಪತ್ತು ನಿರ್ವವಣಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿ, ಪರಿಸರ ಸಂರಕ್ಷಣೆ, ಸೇವಾ ಮನೋಭಾವ, ನಾಯಕತ್ವ ಗುಣಗಳನ್ನು ಬಾಲ್ಯದಿಂದಲೇ ರೂಡಿಸಲು ಮತ್ತು ಎಲ್ಲಾದರೂ ವಿಪತ್ತು ಸಂಭವಿಸಿದರೆ  ಅಲ್ಲಿ ಸೇವೆ ಸಲ್ಲಿಸಲು ಈ ಶಿಬಿರವು ತುಂಬಾ ಅನುಕೂಲವಾಗಿದೆ, ಯುವಜನಾಂಗ ತಮ್ಮ  ಅಮೂಲ್ಯವಾದ ಸಮಯವನ್ನು ಇಂತಹ ಶಿಬಿರಗಳಲ್ಲಿ ಭಾಗವಹಿಸಿ ಭವಿಷ್ಯದ ಸಮಾಜ ಸೇವಕರಾಗಿ ರೂಪಗೊಳ್ಳಬೇಕು.  ಈ ನಿಟ್ಟಿನಲ್ಲಿ  ಸ್ಕೌಟ್ಸ್ ಗೈಡ್ಸ್  ಸಂಸ್ಥೆ ಉತ್ತಮ ಶಿಕ್ಷಣ ನೀಡುತ್ತಿದ್ದು ಎಲ್ಲಾ ವಿಧ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ   ಭಾಗವಹಿಸಬೇಕು ಎಂದು ತಿಳಿಸಿದರು.
ಮಾಲೂರು ಕ್ಷೇತ್ರಶಿಕ್ಷಣಾಧಿಕಾರಿ ಮಾಧವರೆಡ್ಡಿ ಮಾತನಾಡಿ ಸಮಾಜದ ಪ್ರಗತಿಗೆ ನಾವು ನಮ್ಮ ಕೈಲಾದ ಮಟ್ಟಿಗೆ ಸೇವೆ ಸಲ್ಲಿಸಲು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಉತ್ತಮ ವೇಧಿಕೆ ಯಾಗಿದ್ದು ಈ ವೇಧಿಕೆ ಮೂಲಕ ಶಾಲಾ ಮಕ್ಕಳಲ್ಲಿ ಸ್ವಯಂ ಶಿಸ್ತು, ದೇಶಭಕ್ತಿ, ವಿಶ್ವ ಶಾಂತಿಗಾಗಿ ದುಡಿಯುವ ಹಾಗೂ ನಮ್ಮ ಕೆಲಸವನ್ನು ನಾವೇ ಮಾಡಿಕೊಂಡು ಇತರರಿಗೆ ಮಾದರಿಯಾಗಿ ಕಾಣಲು ಹಾಗೂ ಇತರರನ್ನು ನಮ್ಮಂತೆ ಮಾರ್ಪಡಿಸಲು ಸ್ಕೌಟ್ಸ್ ಗೈಡ್ಸ್ ಶಿಕ್ಷಣ ಪೂರಕವಾಗಿದೆ  ವಿಪತ್ತು ಸಂಭವಿಸಿದ ಸಂದರ್ಭದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸ್ವಯಂ ಸೇವಕರು ಉತ್ತಮ ತರಬೇತಿಯನ್ನು ಪಡೆದು ತಮ್ಮ ಅಮೂಲ್ಯವಾದ ಸೇವೆಯನ್ನು ಸಲ್ಲಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಪತ್ತು ನಿರ್ವಹಣಾ ತರಬೇತಿಯ ಸಂಪನ್ಮೂಲ ವ್ಯಕ್ತಿ ಶ್ರಿ ಕೆ.ರಾಜ್ ಕುಮಾರ್, ಮಾಲೂರು ಸ್ಥಳೀಯ ಸಂಸ್ಥೆ ಉಪಾಧ್ಯಕ್ಷ ನಂಜುಂಡಗೌಡ,  ಜಿಲ್ಲಾ ಸಂಘಟನಾ ಆಯುಕ್ತ ವಿ.ಬಾಬು, ಜಿಲ್ಲಾ ಸಂಘಟಕ ವಿಶ್ವನಾಥ ಸಿಬ್ಬಂದಿಯಾದ  ಹರೀಶ್, ಪವಿತ್ರ, ವೆಂಕಟೇಶ್ ಉಪಸ್ಥಿತರಿದ್ದರು.

ಚಿತ್ರ : ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ನಡೆದ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವಿಪತ್ತು ನಿರ್ವಹಣಾ ಶಿಬಿರವನ್ನು ಮಾಲೂರು ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರವಿಕುಮಾರ್ ಉದ್ಘಾಟಿಸಿದರು.


 
Top