मनोरंजन

Blog single photo

ಜಾನಪದ ಕಲೆಗಳನ್ನು ಉಳಿಸಲು ಕರೆ

22/04/2021

ಕೋಲಾರ,ಏ.22 (ಹಿ.ಸ) : ಜಾನಪದ ಕಲೆಗಳು ನಮ್ಮ ಸಂಸ್ಕøತಿಯನ್ನು ಉಳಿಸುವ ಸಾಧನಗಳಾಗಿವೆ. ಈ ಜಾನಪದ ಕಲೆಯನ್ನು ನಂಬಿಕೊಂಡು ಬಹಳಷ್ಟು ಕಲಾವಿದರು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಕರೋನಾ ಎರಡನೇ ಅಲೆಯಿಂದ ಮತ್ತೆ ಕಾರ್ಯಕ್ರಮಗಳಿಲ್ಲದೆ ಬದುಕುವುದು ಹೇಗೆ ಎಂದು ಭಯಭೀತಗೊಂಡಿದ್ದಾರೆ ಜನಶಕ್ತಿ ಸೇನೆಯ ರಾಜ್ಯಾಧ್ಯಕ್ಷ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಆಕಾಂಕ್ಷಿ ಕೆಂಬೋಡಿ ನಾರಾಯಣಸ್ವಾಮಿ ತಿಳಿಸಿದರು.

ಕೋಲಾರ ತಾಲ್ಲೂಕಿನ ಚೌಡದೇನಹಳ್ಳಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಹಾಗೂ ಶಾಂತಿ ಸೌಹಾರ್ಧ ಕ್ರೀಡೆ ಮತ್ತು ಸಾಂಸ್ಕøತಿಕ ಸಂಸ್ಥೆ ವತಿಯಿಂದ ವಿಶೇಷ ಘಟಕ ಯೋಜನೆಯಲ್ಲಿ ಪ್ರಾಯೋಜನೆ ಪಡೆದ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕಲಾವಿದರಿಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಕಾರ್ಯಕ್ರಮಗಳನ್ನು ನೀಡಿ ಪ್ರೋತ್ಸಾಹಿಸುತ್ತಿದೆ. ಹಾಗೇ ಕಲಾವಿದರು ಸಂಕಷ್ಟದಲ್ಲಿದ್ದಾಗ ಆರ್ಥಿಕ ನರೆವು ಹಾಗೂ ಆಹಾರ ಕಿಟ್ ಸಹ ನೀಡಿದ್ದಾರೆ. ಇದು ಸ್ವಲ್ಪ ಮಟ್ಟಿಗೆ ಸಮಾಧಾನ ತರುವಂತಹದ್ದು ಆಗಿದೆ. ಆದರೆ ಪ್ರತಿ ಕಲಾವಿದನಿಗೂ ದಿನಕ್ಕೆ ಐದು ನೂರು ರೂಪಾಯಿ ಸಂಭಾವನೆ ಸಿಗುವಂತಾದಾಗ ಮಾತ್ರ ಕಲಾವಿದ ಬದುಕಲು ಸಾಧ್ಯ ಎಂದರು.

ಚೌಡದೇನಹಳ್ಳಿ ಗ್ರಾಮದ ಮುಖಂಡರಾದ ಚಿಕ್ಕಮುನಿಯಪ್ಪ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಇಂತಹ ಜಾನಪದ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ಯುವ ಪೀಳಿಗೆ ನೂತನ ತಂತ್ರಜ್ಞಾನದ ಗುಂಗಿನಲ್ಲಿ ನಮ್ಮ ಸಂಸ್ಕøತಿಯ ಭಾಗವಾದ ಜಾನಪದ ಕಲೆಗಳನ್ನು ಮರೆಯುತ್ತಿದ್ದಾರೆ. ಯುವ ಜನಾಂಗವು ಜಾನಪದ ಕಲೆಗಳನ್ನು ಕಲಿಯುವ ಮತ್ತು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಬಿ.ಸೌದಾಮಿನಿ ಜಾನಪದ ಕಲಾತಂಡ, ಅಂಕಿತ ಮತ್ತು ಜೀವನಶ್ರೀ ತಂಡದಿಂದ ಸುಗಮ ಸಂಗೀತ, ಈನೆಲ ಈಜಲ ಈನೆಲ ಈಜಲ ವೆಂಕಟಾಚಲಪತಿ ಮತ್ತು ತಂಡದಿಂದ ಜಾನಪದ ಹಾಡುಗಾರಿಕೆ, ಹೆಚ್. ಹನುಮಂತಪ್ಪ ದಾಸರಿಂದ ತತ್ವಪದ ಗಾಯನ, ಜಾನಪದ ಗಾಯಕ ಎಂ.ನಾಗರಾಜ್, ಐತರಾಸನಹಳ್ಳಿ ವಿ.ಸಂಜೀವಯ್ಯರವರಿಂದ ಭಜನೆ ಕಾರ್ಯಕ್ರಮ, ಕಲ್ಲಂಡೂರು ಮುನಿವೆಂಕಟಪ್ಪ ಮತ್ತು ಜಿ.ನಾರಾಯಣಸ್ವಾಮಿ ತಂಡದಿಂದ ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು. 

ಈ ಸಂದರ್ಭದಲ್ಲಿ ಶಾಂತಿ ಸೌಹಾರ್ಧ ಕ್ರೀಡೆ ಮತ್ತು ಸಾಂಸ್ಕøತಿಕ ಸಂಸ್ಥೆಯ ಕಾರ್ಯದರ್ಶಿ ಹೆಚ್.ಶಾಂತಮ್ಮ, ಹಾರ್ಮೋನಿಯಂ ಯಲವಾರ ಮುನಿಯಪ್ಪ, ತಬಲ ಗಂಗಾಧರ್, ಗ್ರಾಮ ಪಂಚಾಯಿತಿ ಸದಸ್ಯರಾದ ವೆಂಕಟೇಶ್, ನಾಗರಾಜ್, ಕುಪೇಂದ್ರ, ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಸಂಘದ ಅಧ್ಯಕ್ಷರಾದ ರಾಧ ಭಾಗವಹಿಸಿದ್ದರು.

ಚಿತ್ರ : ಕೋಲಾರ ತಾಲ್ಲೂಕಿನ ಚೌಡದೇನಹಳ್ಳಿ ಗ್ರಾಮದಲ್ಲಿ ನಡೆದ ಜಾನಪದ ಸಂಭ್ರಮ ಕಾರ್ಯಕ್ರಮವನ್ನು ಜನಶಕ್ತಿ ಸೇನೆಯ ರಾಜ್ಯಾಧ್ಯಕ್ಷ ಕೆಂಬೋಡಿ ನಾರಾಯಣಸ್ವಾಮಿ ಉದ್ಘಾಟಿಸಿದರು.


 
Top