क्षेत्रीय

Blog single photo

ಮಾರ್ಚ್ 27 ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ ಆರಂಭ

30/11/2019


ಬೆಂಗಳೂರು, ನ.30 (ಹಿ.ಸ) -  2019-20ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢಶಾಲಾ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದೆ.
ಮಾರ್ಚ್ 27ರಿಂದ ಏಪ್ರಿಲ್ 9ರ ತನಕ ಎಸ್‌ಎಸ್‌ಎಲ್‌ಸಿ ಬೋರ್ಡ್ ಪರೀಕ್ಷೆ ನಡೆಯಲಿದ್ದು, ಈ ಸಂಬಂಧ ಅಧಿಕೃತ ವೇಳಾಪಟ್ಟಿಯನ್ನು ಮಂಡಳಿ ತನ್ನ ಅಧಿಕೃತ ವೆಬ್ ಸೈಟ್‌ನಲ್ಲಿ ಪ್ರಕಟಿಸಿದೆ.
ಬೆಳಗ್ಗೆ 9.30 ರಿಂದ ಮಧ್ಯಾಹ್ನ 12.30ರವರೆಗೆ ಮತ್ತು ಕೆಲವು ಪರೀಕ್ಷೆಗಳು ಮಧ್ಯಾಹ್ನ 2 ರಿಂದ 5.15 ರವರೆಗೆ ನಡೆಯಲಿದೆ.
ಪರೀಕ್ಷಾ ವೇಳಾಪಟ್ಟಿ - 
ಮಾರ್ಚ್​ 27– ಪ್ರಥಮ ಭಾಷೆ, 
ಮಾರ್ಚ್  30 -  (ಕೋರ್ ಸಬ್ಜೆಕ್ಟ್​) ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ ಮತ್ತು ಹಿಂದೂಸ್ತಾನಿ ಸಂಗೀತ
ಏಪ್ರಿಲ್ 01 – ದ್ವಿತೀಯ ಭಾಷೆ
ಏಪ್ರಿಲ್ 03- ತೃತೀಯ ಭಾಷೆ  ಎನ್​ಎಸ್​ಕ್ಯೂಎಫ್​ ಪರೀಕ್ಷಾ ವಿಷಯಗಳು
​ಏಪ್ರಿಲ್ 04  ಎಲಿಮೆಂಟ್ಸ್ ಆಫ್ ಮೆಕಾನಿಕಲ್ ಮತ್ತು ಎಲೆಕ್ಟ್ರಿಕಲ್ ಇಂಜಿನಿಯರಿಂಗ್-2, ಇಂಜಿನಿಯರಿಂಗ್ ಗ್ರಾಫಿಕ್ಸ್​-2, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್​ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್, ಅರ್ಥಶಾಸ್ತ್ರ
ಏಪ್ರಿಲ್ 07-  ಗಣಿತ, ಸಮಾಜಶಾಸ್ತ್ರ
ಏಪ್ರಿಲ್ 09-  ಸಮಾಜ ವಿಜ್ಞಾನ
ಹೆಚ್ಚಿನ ಮಾಹಿತಿಗಾಗಿ http://kseeb.kar.nic.in/index.asp ಲಾಗಿನ್ ಆಗಬಹುದಾಗಿದೆ. 


 
Top