विदेश

Blog single photo

ಜೆಕ್ ರಿಪಬ್ಲಿಕ್ ಕಾನ್ಸುಲೇಟ್ ವತಿಯಿಂದ ರಾಜ್ಯಕ್ಕೆ 70 ಕೊರೊವೆಂಟ್ ವೆಂಟಿಲೇಟರ್

03/05/2021

ಬೆಂಗಳೂರು, ಮೇ 03:  ಬೆಂಗಳೂರಿನ ಜೆಕ್ ರಿಪಬ್ಲಿಕ್ ಕಾನ್ಸುಲೇಟ್  ಕಚೇರಿಯ ವತಿಯಿಂದ ರಾಜ್ಯಕ್ಕೆ 70 ಕೊರೊವೆಂಟ್ ವೆಂಟಿಲೇಟರ್ ಗಳನ್ನು ಕೊಡುಗೆಯಾಗಿ ನೀಡಲು ಮುಂದಾಗಿದ್ದಾರೆ. 

ಈ ಸಂಬಂಧ  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಇಂದು  ಭೇಟಿ ಮಾಡಿದ ಜೆಕ್ ರಿಪಬ್ಲಿಕ್ ನ ಕಾನ್ಸಲ್  ಸಿ.ಎಸ್.ಪ್ರಕಾಶ್ , ಮೈಕೋ ಮೆಡಿಕಲ್ ಎಸ್.ಆರ್.ಒ ಸಂಸ್ಥೆಯು ಈ ವೆಂಟಿಲೇಟರ್ ಗಳನ್ನು ರಾಜ್ಯದಲ್ಲಿ ಕೋವಿಡ್ 19 ಸೋಂಕಿತರ ನೆರವಿಗೆಂದು  ಕೊಡುಗೆಯಾಗಿ ನೀಡಿರುವುದಾಗಿ ತಿಳಿಸಿದರು. 

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಲಕ್ಷಣ ಸವದಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಪೆರು ಕಾನ್ಸುಲೇಟ್ ಕಚೇರಿಯ ವಿಕ್ರಂ ವಿಶ್ವನಾಥ್, ರುಆಂಡಾ ಕಾನ್ಸುಲ್ ಮೋಹನ್ ಸುರೇಶ್ ಉಪಸ್ಥಿತರಿದ್ದರು.


 
Top