ट्रेंडिंग

Blog single photo

2018-19ನೇ ಸಾಲಿನಲ್ಲಿ ಶೇ.8.65 ರಷ್ಟು ಬಡ್ಡಿ ನೀಡಲು ಇಪಿಎಫ್ಓ ಅನುಮತಿ

09/10/2019



ನವದೆಹಲಿ, ಅ.09 (ಹಿ.ಸ) -  2018-19ರ ಸಾಲಿಗೆ ಅನ್ವಯವಾಗುವಂತೆ ಕಾರ್ಮಿಕ ಭವಿಷ್ಯ ನಿಧಿ(ಇಪಿಎಫ್)ಯ ಬಡ್ಡಿ ದರವನ್ನು ಶೇ.8.65ಕ್ಕೆ ಏರಿಕೆ ಮಾಡಲಾಗಿದೆ ಎಂದು ಇಪಿಎಫ್ಒ ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆರ್ಗನೈಜೇಶನ್ ಇಂದು ಘೋಷಿಸಿದೆ. ಇಪಿಎಫ್ ಖಾತೆ ಹೊಂದಿರುವ ಆರು ಕೋಟಿ ಮಂದಿ ಸದಸ್ಯರಿಗೆ 54 ಸಾವಿರ ಕೋಟಿ ಬಡ್ಡಿದರ ಕ್ರೆಡಿಟ್ ಮಾಡಲಾಗಿದೆ ಎಂದು ಇಪಿಎಫ್ ಒ ಟ್ವೀಟ್ ಮೂಲಕ ತಿಳಿಸಿದೆ. 2017-18ರ ಸಾಲಿನಲ್ಲಿ ಇಪಿಎಫ್ಒ ಕಾರ್ಮಿಕ ಭವಿಷ್ಯ ನಿಧಿಗೆ ಶೇ.8.55ರಷ್ಟು ಬಡ್ಡಿದರ ನೀಡಲು ಅನುಮತಿ ನೀಡಿತ್ತು. ಇದೀಗ 2019ರ ಫೆಬ್ರುವರಿ 22ರಂದು ಇಪಿಎಫ್ ಗೆ ಶೇ.8.65ರಷ್ಟು ಬಡ್ಡಿದರ ನೀಡಲು ಇಪಿಎಫ್ ಒ ಅನುಮತಿ ನೀಡಿರುವುದಾಗಿ ವರದಿ ತಿಳಿಸಿದೆ.


 
Top