क्षेत्रीय

Blog single photo

ರಾಜವಂಶಸ್ಥ ಯದುವೀರ್ ಅವರಿಂದ ಶಮಿ ವೃಕ್ಷಕ್ಕೆ ಪೂಜೆ

08/10/2019


ಮೈಸೂರು, ಅ.08 (ಹಿ.ಸ) -  ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ವಿಶೇಷ ಆಕರ್ಷಣೆಯಾದ ಜಂಬೂ ಸವಾರಿ ಇಂದು ಮಧ್ಯಾಹ್ನ ನಡೆಯಲಿದ್ದು, ಅದಕ್ಕೂ ಮುನ್ನ ರಾಜವಂಶಸ್ಥ ಯದುವೀರ್ ಅವರು ಅರಮನೆ ಆವರಣದಲ್ಲಿರುವ ಬನ್ನಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿದರು.
ಮತ್ತೊಂದೆಡೆ ಮೈಸೂರು ಅರಮನೆ ಆವರಣದಲ್ಲಿ  ಜಟ್ಟಿಗಳ ಸಾಂಪ್ರದಾಯಿಕ ವಜ್ರಮಷ್ಠಿ ಕಾಳಗಕ್ಕೆ ಚಾಲನೆ ನೀಡಲಾಯಿತು. ಇಂದು ಬೆಳಗ್ಗೆ ಚಾಮುಂಡಿ ಬೆಟ್ಟದಿಂದ ಅರಮನೆಗೆ ಚಾಮುಂಡಿ ಉತ್ಸವ ಮೂರ್ತಿಯನ್ನು ತರಲಾಯಿತು.ಅರಮನೆ ಆವರಣದಲ್ಲಿರುವ ಭುವನೇಶ್ವರಿ ದೇವಾಲಯದ ಸಮೀಪ ಇರುವ ಶಮಿ (ಬನ್ನಿ) ವೃಕ್ಷಕ್ಕೆ ಯದುವೀರ್ ರಾಜಮನೆತನದ ಪುರೋಹಿತರ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುವಿನೊಂದಿಗೆ ಮೆರವಣಿಗೆ ನಡೆಸಿ ಅರಮನೆಯ ಆಯುಧಗಳಿಗೆ ಯಧುವೀರ್ ಪೂಜೆ ಸಲ್ಲಿಸಿದರು.
ನವರಾತ್ರಿಯ ವಿಜಯದಶಮಿ ಅಂಗವಾಗಿ ಮೈಸೂರು ಅರಮನೆಯಲ್ಲಿ ದಸರಾ ಸಂಭ್ರಮ, ಜಂಬೂ ಸವಾರಿ ಕಣ್ತುಂಬಿಕೊಳ್ಳಲು, ದೇಶ, ವಿದೇಶದಿಂದ ಸಾವಿರಾರು ಪ್ರವಾಸಿಗರು ಸಾಂಸ್ಕೃತಿಕ ನಗರಿಗೆ ಆಗಮಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸುಮಾರು ಎಂಟು ಸಾವಿರಕ್ಕೂ ಅಧಿಕ ಮಂದಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.


 
Top