खेल

Blog single photo

ಆರಂಭದಲ್ಲೇ ಹೊರಬಿದ್ದು ನಿರಾಶೆ ಮೂಡಿಸಿದ ಭಾರತದ ದ್ಯುತಿ ಚಂದ್

29/09/2019


ನವದೆಹಲಿ, ಸೆ.29 (ಹಿ.ಸ) - ದೋಹಾದಲ್ಲಿ ನಡೆಯುತ್ತಿರುವ 17 ನೇ ಐಎಎಎಫ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ ನ ಮಹಿಳೆಯರ 100 ಮೀಟರ್ ಪಂದ್ಯದಲ್ಲಿ ಆರಂಭಿಕ ಹಂತದಲ್ಲೇ  ಭಾರತದ ಓಟಗಾರ್ತಿ ದ್ಯುತಿ ಚಂದ್‌ಗೆ ಹೊರಬಿದ್ದು ನಿರಾಸೆ ಮೂಡಿಸಿದರು. 
ಜೈಪುರ ಮೂಲದ ಈ ಓಟಗಾರ್ತಿಯಾದ ದ್ಯುತಿ ಚಂದ್,  ಈ ಪ್ರತಿಷ್ಠಿತ ಪಂದ್ಯಾವಳಿಯ ಸೆಮಿಫೈನಲ್ ತಲುಪಲು ವಿಫಲವಾದರು. ಮಹಿಳೆಯರ 100 ಮೀ ಓಟದಲ್ಲಿ 47 ಸ್ಪರ್ಧಿಗಳಲ್ಲಿ 37 ನೇ ಸ್ಥಾನದಲ್ಲಿದ್ದರು. ಈ ಹಿನ್ನಲೆಯಲ್ಲಿ ಅವರು  2020 ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ವಿಫಲರಾದರು.  ಒಲಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯಲು ನಿಗದಿಪಡಿಸಿದ್ದ ಸಮಯ 11.15 ಸೆಕೆಂಡುಗಳು, ಆದರೆ ದ್ಯುತಿ ಚಂದ್ ಈ ಗುರಿಯನ್ನು ತಲುಪಲು ವಿಫಲರಾದರು. ಜುಲೈನಲ್ಲಿ ನೇಪಲ್ಸ್‌ನಲ್ಲಿ ನಡೆದ  ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ 100 ಮೀಟರ್ ಓಟದಲ್ಲಿ 11.32 ಸೆಕೆಂಡುಗಳನ್ನು ಗಳಿಸಿದ ಬಳಿಕ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಓಟಗಾರ ಎಂಬ ಹೆಗ್ಗಳಿಕೆಗೆ ದ್ಯುತಿ ಚಂದ್ ಪಾತ್ರರಾಗಿದ್ದರು. ಜಕಾರ್ತಾ ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳೆಯರ 100 ಮೀ.ವಿಭಾಗದಲ್ಲಿ ಬೆಳ್ಳಿ ಪದಕ ಗಳಿಸಿದ್ದರು. 


 
Top