क्षेत्रीय

Blog single photo

ಸುಪ್ರೀಂ ಕೋರ್ಟ್ ನ್ಯಾಯಾಧೀಶರೂ ಬಿಜೆಪಿ ಆಡಳಿತಕ್ಕೆ ಹೆದರುತ್ತಾರೆ - ಎಚ್. ಡಿ. ದೇವೇಗೌಡ

30/11/2019


ಚಿಕ್ಕಬಳ್ಳಾಪುರ, ನ. 30 (ಹಿ.ಸ) -  ದೇಶದ ರಾಜಕೀಯ ಪರಿಸ್ಥಿತಿ ಇಂದು ಹೀನಾಯ ಪರಿಸ್ಥಿತಿಗೆ ತಲುಪಿದೆ. ಬಿಜೆಪಿ ಆಡಳಿತಕ್ಕೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಹೆದರುವಂತಾಗಿದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕಬಳ್ಳಾಪುರ ನಗರದಲ್ಲಿ ಇಂದು ಜೆಡಿಎಸ್ ಅಭ್ಯರ್ಥಿ ಎ.ರಾಮಕೃಷ್ಣ ಪರ ಚುನಾವಣೆ ಪ್ರಚಾರ ನಡೆಸಿದರು. 
ದೇಶದಲ್ಲಿ ಪ್ರಾದೇಶಿಕ ಪಕ್ಷಗಳು ಬಲಗೊಳ್ಳಬೇಕು. ಆಂದ್ರ, ತಮಿಳುನಾಡು, ತೆಲಂಗಾಣ ನೋಡಿ ರಾಜ್ಯದ ಕನ್ನಡಿಗರು ಕಲಿಯಬೇಕಿದೆ. ಪ್ರಾದೇಶಿಕ ಪಕ್ಷಗಳು ಬಲಯುತವಾದರೇ, ಮನೆ ಬಾಗಿಲಿಗೆ ಅಧಿಕಾರ ಹುಡುಕಿ ಬರುತ್ತದೆ ಎಂದು ಹೇಳಿದರು. ಶಿವಸೇನೆ ಹೆಚ್ಚು ಸ್ಥಾನ ಪಡೆದ್ದಿದ್ದಕ್ಕೆ ಸೋನಿಯಾಗಾಂಧಿ, ಶರದ್ ಪವರ್ ಶಿವಸೇನೆ ನಾಯಕರ ಮನೆ ಬಾಗಿಗೆ ಹೋಗಿ ಮುಖ್ಯಮಂತ್ರಿ ಸ್ಥಾನ ಅವರಿಗೆ ಬಿಟ್ಟು ಕೊಟ್ಟರು. ರಾಜ್ಯದ ಅಭಿವೃದ್ಧಿ ಆಗಬೇಕಾದರೆ ಪ್ರಾದೇಶಿಕ ಪಕ್ಷಕ್ಕೆ ರಾಜ್ಯದ ಜನರು ಬಲ ತುಂಬಬೇಕು. ಆಂದ್ರ, ತಮಿಳುನಾಡಿನ ಜನರು ಅಲ್ಲಿ ಕಾಂಗ್ರೆಸ್, ಬಿಜೆಪಿ ತಲೆ ಎತ್ತಲು ಬಿಟ್ಟಿಲ್ಲ. ಇಂದು ಕಾಶ್ಮೀರದ ಪರಿಸ್ಥಿತಿ ಏನಾಗಿದೆ. ತಾವು ಪ್ರಧಾನಿ ಆಗಿದ್ದಾಗ ಒಂದು ಸಾವು ಆಗಿಲ್ಲ. ಇವತ್ತು ದಿನ ಬೆಳಗಾದರೆ ಸಾವು - ನೋವು ನೋಡುವಂತಾಗಿದೆ. ಸಾವಿರಾರು ಜನರನ್ನು ಜೈಲಿನಲ್ಲಿಟ್ಟಿದ್ದಾರೆಂದರು. ತಾವು ಪ್ರಧಾನಿಯಾಗಿದ್ದಾಗ, ಅಧಿಕಾರಿಗಳು ಅಲ್ಲಿಗೆ ಹೋಗೋದು ಬೇಡವೆಂದು ಹೇಳಿದರು. ಅದರೂ, ನಾನು ಅಲ್ಲಿಗೆ ಹತ್ತಾರು ಬಾರಿ ಹೋಗಿ ಬಂದೆ ಏನು ಆಗಲಿಲ್ಲ ಎಂದು ಹೇಳಿದರು.  ಮೇಕೆದಾಟು ಯೋಜನೆಯನ್ನು ಕೇಂದ್ರ ಸಚಿವ ಗಡ್ಕರಿ ರದ್ದುಗೊಳಿಸಿದರು.  ಇದರಿಂದ ರಾಜ್ಯಕ್ಕೆ ಸಾಕಷ್ಡು ನಷ್ಡ ಉಂಟಾಗಿದೆ ಎಂದು ಆರೋಪಿಸಿದರು. 
ಇಂದು ನಾನು ಸಂಸತ್ತಿನದ್ದಿದ್ದರೆ, ರಾಜ್ಯದ ಪರ ಮಾತನಾಡುತ್ತಿದ್ದೆ, ಆದರೆ, ನನ್ನನ್ನೇ ತುಮಕೂರಿನಲ್ಲಿ ಸೋಲಿಸಿದರು. ಆದರೆ, ನನಗೆ ಅಧಿಕಾರ ಬೇಕಿಲ್ಲ, ರಾಜ್ಯದ ಅಭಿವೃದ್ಧಿ ಆಗಬೇಕು. ಮತ್ತೆ ನಾನು ಪ್ರಧಾನಿ ಆಗಬೇಕೆಂದು ಚುನಾವಣೆ ಪ್ರಚಾರಕ್ಕೆ ಬಂದಿಲ್ಲ ಎಂದು ಹೇಳಿದರು. 


 
Top