मनोरंजन

Blog single photo

ಕಾಳಿದಾಸ ಕನ್ನಡಮೇಷ್ಟ್ರು - ಚಿತ್ರಮಂದಿರಗಳಿಂದ ಎತ್ತಂಗಡಿ - ಜಗ್ಗೇಶ್ ಅಕ್ರೋಶ

30/11/2019



ಬೆಂಗಳೂರು, ನ.30 (ಹಿ.ಸ) - ಕನ್ನಡ ಚಿತ್ರರಂಗದ ವಿರುದ್ಧ ಮತ್ತೆ ನಟ ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಇತ್ತೀಚೆಗೆ ನಟ ಜಗ್ಗೇಶ್ ಅಭಿನಯದ ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರ ಬಿಡುಗಡೆಯಾಗಿತ್ತು.   ಇದಕ್ಕೆ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಇದೀಗ ಈ ಚಿತ್ರವನ್ನು ಚಿತ್ರಮಂದಿರಗಳಿಂದ ಎತ್ತಂಗಡಿ ಮಾಡಲಾಗುತ್ತಿದೆ ಎಂದು ನಟ ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರಕ್ಕೆ ಉತ್ತಮ ಕಲೆಕ್ಷನ್ ಇದ್ದರೂ ಥಿಯೇಟರ್ ಮಾಲೀಕರು ಬಲವಂತವಾಗಿ ಚಿತ್ರವನ್ನು ತೆಗೆಯುತ್ತಿದ್ದಾರೆ. ಉತ್ತಮ ಚಿತ್ರಕ್ಕೆ ಆಗುತ್ತಿರುವ ಮೋಸವನ್ನು ನೋಡಿಯೂ ಕೂಡ ಚಿತ್ರರಂಗದ ಹಿರಿಯರು ಮೌನವಾಗಿದ್ದಾರೆ ಎಂದು ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 


 
Top