ट्रेंडिंग

Blog single photo

ಆಡಳಿತ ಮಂಡಳಿ ತಪ್ಪಿಗೆ 77ಕ್ಕೂ ಅಧಿಕ ಕಾಲೇಜುಗಳು ಕಪ್ಪುಪಟ್ಟಿಗೆ - ಬೆಂ.ವಿವಿ.

18/07/2019


ಬೆಂಗಳೂರು, ಜು.18 (ಹಿ.ಸ) -  ಕಾಲೇಜು ಆಡಳಿತಾಧಿಕಾರಿಗಳಿಂದಾದ ತಪ್ಪಿಗೆ ನಗರದ 77 ಕಾಲೇಜುಗಳ ಸುಮಾರು 5 ಸಾವಿರ ವಿದ್ಯಾರ್ಥಿಗಳು ಬೆಲೆ ತೆರಬೇಕಾಗಿದೆ. ಕ್ರೀಡಾ ಮತ್ತು ಸಾಂಸ್ಕೃತಿಕ ಶುಲ್ಕದ ರಶೀದಿ ಸಲ್ಲಿದ ಕಾರಣ 77ಕ್ಕೂ ಅಧಿಕ ಕಾಲೇಜುಗಳನ್ನು ಬೆಂಗಳೂರು ವಿಶ್ವವಿದ್ಯಾಲಯ ಕಪ್ಪು ಪಟ್ಟಿಗೆ ಸೇರಿಸಿದೆ.
ಕ್ರೀಡಾ ಮತ್ತು ಸಾಂಸ್ಕೃತಿಕ ಶುಲ್ಕವಾಗಿ ಸಂಗ್ರಹಿಸಲಾಗುವ 30 ಲಕ್ಷ ಹಣದ ವೆಚ್ಚದ ಬಗ್ಗೆ ವಿಶ್ವವಿದ್ಯಾಲಯವನ್ನು ಹಿಂದಿನ ಸರ್ಕಾರ ದೂಷಿಸಿತ್ತು. ಇದೀಗ ಮತ್ತೆ  ಶುಲ್ಕವನ್ನು ಸಂಗ್ರಹಿಸುತ್ತಿದ್ದು,  ಜುಲೈ 18ಕ್ಕೆ ಗಡುವನ್ನು ನೀಡಿದೆ. 
 ಬಿಎ, ಬಿಎಸ್ ಎ, ಬಿಕಾಂ, ಬಿಬಿಎ, ಬಿಸಿಎ, ಬಿವಿಎ, ಬಿಎಸ್ಸಿ, ಮತ್ತಿತರೆ ಕೋರ್ಸ್ ಗಳಲ್ಲಿ ಎರಡನೇ ಹಾಗು ತೃತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗು  2018-19 ನೇ ಸಾಲಿನ ಬಿಹೆಚ್ ಎಂ ಸಾಲಿಗೆ ಸೇರ್ಪಡೆಯಾಗಿರುವ ದ್ವಿತೀಯ, ತೃತೀಯ ಹಾಗು ನಾಲ್ಕನೇ ವರ್ಷದ ವಿದ್ಯಾರ್ಥಿಗಳ ಮಾಹಿತಿ ಸಲ್ಲಿಸುವಂತೆ ಈ ಕಾಲೇಜುಗಳಿಗೆ ವಿಶ್ವವಿದ್ಯಾಲಯ ಆದೇಶ ಹೊರಡಿಸಿದೆ.


 
Top