मनोरंजन

Blog single photo

ಗೌತಮ್ ಅಯ್ಯರ್ ನಿರ್ದೇಶನದ ಚಿತ್ರ ವೃತ್ರ ಅ.11 ರಂದು ಬೆಳ್ಳಿತೆರೆಗೆ

08/10/2019


ಬೆಂಗಳೂರು, ಅ.08 (ಹಿ.ಸ) -  ವೃತ್ರ ಸಿನಿಮಾದಲ್ಲಿ ಆರಂಭದಲ್ಲಿ ನಟಿ ರಶ್ಮಿಕಾ ಮಂದಣ್ಣ ನಟಿಸುವುದಾಗಿ ಸುದ್ದಿಯಾಗಿತ್ತು. ಇದೀಗ ಆ ಚಿತ್ರ ಬಿಡುಗಡೆ ಹಂತಕ್ಕೆ ಬಂದಿದ್ದು, ಅಕ್ಟೋಬರ್‌ 11 ರಂದು ಚಿತ್ರ ತೆರೆಕಾಣುತ್ತಿದೆ. ಗೌತಮ್‌ ಅಯ್ಯರ್‌ ಈ ಚಿತ್ರದ ನಿರ್ದೇಶಕರು. ರಶ್ಮಿಕಾ ಮಂದಣ್ಣಳ ಜಾಗಕ್ಕೆ ನಿತ್ಯಾಶ್ರೀ ಬಂದಿದ್ದು, ಚಿತ್ರದಲ್ಲಿ ಅವರು ತನಿಖಾಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಇದೊಂದು ಕ್ರೈಮ್‌ ಥ್ರಿಲ್ಲರ್‌ ಸಿನಿಮಾವಾಗಿದ್ದು, ಇಂದಿನ ಟ್ರೆಂಡ್‌ಗೆ ತಕ್ಕಂತೆ ಸಿನಿಮಾ ಮೂಡಿಬಂದಿದ್ದರಿಂದ ಚಿತ್ರವನ್ನು ಜನ ಇಷ್ಟಪಡುತ್ತಾರೆಂಬ ವಿಶ್ವಾಸ ಚಿತ್ರತಂಡಕ್ಕಿದೆ. ಇನ್ನು, ರಶ್ಮಿಕಾ ಮಂದಣ್ಣ ಬಿಟ್ಟು ಹೋದ ಜಾಗಕ್ಕೆ ನಿತ್ಯಾಶ್ರೀ ಬಂದಿದ್ದಾರೆ. 
ನಿತ್ಯಾಶ್ರೀ ಸಾಮಾಜಿಕ ಜಾಲತಾಮದಲ್ಲಿ ಕಾಣಿಸಿಕೊಂಡು, ಚಿತ್ರತಂಡದ ಗಮನ ಸೆಳೆಯುವ ಮೂಲಕ ವೃತ್ರ ಚಿತ್ರಕ್ಕೆ ಆಯ್ಕೆಯಾದವರು. ನಿತ್ಯಾಶ್ರೀ ಈ ಚಿತ್ರಕ್ಕಾಗಿ ತಮ್ಮ ವಿವರ ಕಳುಹಿಸಿ ಆಯ್ಕೆಯಾದವರಲ್ಲ. ಇನ್‌ಸ್ಟಾಗ್ರಾಮ್‌ ಮೂಲಕ ನಮಗೆ ಅವರು ಸಿಕ್ಕಿದ್ದು ಎಂದು ಚಿತ್ರದ ನಿರ್ದೇಶಕರು ಹೇಳುತ್ತಾರೆ. 
ನಮ್ಮ ತಂಡ ಇನ್‌ಸ್ಟಾಗ್ರಾಮ್‌ ಹಾಗು ಫೇಸ್‌ಬುಕ್‌ ಮೂಲಕ ಹೊಸ ಪ್ರತಿಭೆಗಳನ್ನು ಹುಡುಕುತ್ತಿತ್ತು. ನಮ್ಮ ಪಾತ್ರಕ್ಕೆ ಹೊಂದುವ ಲುಕ್‌ ಇರುವವರು ಸಿಕ್ಕರೆ ಆ ನಂತರ ಅವರಿಂದ ನಟನೆ ತೆಗೆಸಬಹುದು ಎಂಬ ವಿಶ್ವಾಸವಿತ್ತು. ಹೀಗಾಗಿ ಹುಡುಕುತ್ತಿದ್ದಾಗ ನಮ್ಮ ತಂಡದ ಸದಸ್ಯರೊಬ್ಬರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ನಿತ್ಯಾಶ್ರೀ ಕಾಣಿಸಿಕೊಂಡರು. ಆ ಮೂಲಕ ನಿತ್ಯಾಶ್ರೀ ಈ ಚಿತ್ರಕ್ಕೆ ಆಯ್ಕೆ ಆದರು.  ನಮಗೆ ಮೊದಲು ನಿತ್ಯಾಶ್ರೀ ಅವರಿಗೆ ನಟನೆ ಹಿನ್ನೆಲೆ ಇದೆ ಎಂಬುದು ಗೊತ್ತಿರಲಿಲ್ಲ. ಆ ನಂತರ ಗೊತ್ತಾಗಿದ್ದು, ನಿತ್ಯಾಗೆ ರಂಗಭೂಮಿ ಹಿನ್ನೆಲೆಯಿದ್ದು, 500ಕ್ಕೂ ಹೆಚ್ಚು ಶೋಗಳನ್ನು ನೀಡಿದ್ದಾರೆ ಎಂಬುದು. ಬೆಂಗಳೂರು ಮೂಲದ ನಿತ್ಯಾಶ್ರೀ ತಮ್ಮ ಪಾತ್ರಕ್ಕೆ ತಾವೇ ಡಬ್‌ ಮಾಡಿದ್ದಾರೆ. ಚಿತ್ರದಲ್ಲಿ ನಿತ್ಯಾಶ್ರೀ, ಪ್ರಕಾಶ್‌ ಬೆಳವಾಡಿ, ಸುಧಾರಾಣಿ, ತರುಣ್‌ ಸುಧೀರ್‌ ಪ್ರಮುಖ ಪಾತ್ರ ಮಾಡಿದ್ದಾರೆ.


 
Top