खेल

Blog single photo

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ - ಭಾರತಕ್ಕೆ ಗಡುವು ವಿಧಿಸಿದ ಪಿಸಿಬಿ

30/09/2019


ಕರಾಚಿ, ಸೆ.30 (ಹಿ.ಸ) - ಏಷ್ಯಾ ಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ ಭಾಗವಹಿಸುವ ಬಗ್ಗೆ ಮುಂದಿನ ವರ್ಷದ ಜೂನ್ ನೊಳಗೆ ಖಚಿತಪಡಿಸಬೇಕೆಂದು ಭಾರತಕ್ಕೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಗಡುವು ವಿಧಿಸಿದೆ.  ಟೀಂ ಇಂಡಿಯಾ ಭಾರತಕ್ಕೆ ಬರುವುದೋ ಇಲ್ಲವೋ ಎಂದು ನಾವು ಕಾದು ನೊಡಬೇಕಿದೆ. ಮುಂದಿನ ಸೆಪ್ಟೆಂಬರ್ ವಿರುದ್ಧ ಸಮಯವಿದ್ದರೂ ನಮಗೆ ಬಿಸಿಸಿಐ ಜೂನ್ ನಲ್ಲಿ ತಿಳಿಸಬೇಕು. ಒಂದು ವೇಳೆ ಭಾರತ ಪಾಲ್ಗೊಳ್ಳುವುದಿಲ್ಲವಾದರೆ, ಪಂದ್ಯವನ್ನು ಸ್ಥಳಾಂತರ ಮಾಡುವರೋ ಎಂದು ಕಾದು ನೋಡುಬೇಕಿದೆ ಎಂದು ಪಿಸಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾಸಿಂ ಖಾನ್ ಹೇಳಿಕೆ ನೀಡಿದ್ದಾರೆ.
ಏಷ್ಯನ್ ಕ್ರಿಕೆಟ್ ಸಮಿತಿ ಮತ್ತು ಐಸಿಸಿ ಸೇರಿ ಈ ನಿರ್ಧಾರ ಕೈಗೊಳ್ಳಬೇಕಿದೆ. ಒಂದು ವೇಳೆ ಭಾರತ ಬರಲು ಒಪ್ಪುವುದಾದರೆ ನಾವು ರಕ್ಷಣೆ ನೀಡುತ್ತೇವೆ ಎಂದು ಹೇಳಿದರು. ಏಷ್ಯಾ ಕಪ್ ಪಂದ್ಯಾವಳಿ 2020ರ ಸಪ್ಟೆಂಬರ್ ನಲ್ಲಿ ಪಾಕಿಸ್ತಾನದಲ್ಲಿ ನಡೆಯಲಿದೆ. ಪಾಕ್,  ಅಫ್ಘಾನಿಸ್ಥಾನ, ಭಾರತ, ಶ್ರೀಲಂಕಾ, ಬಾಂಗ್ಲಾ ದೇಶಗಳು ಕೂಟದಲ್ಲಿ ಪಾಲ್ಗೊಳ್ಳಲಿವೆ. ಆದರೆ ಭಾರತ ತನ್ನ ಪಾಲ್ಗೊಳ್ಳುವಿಕೆಯನ್ನು ಇನ್ನೂ ಖಚಿತಪಡಿಸಿಲ್ಲ.


 
Top