व्यापार

Blog single photo

ಜೆಟ್ ಏರ್ ವೇಸ್ ಸಿಬ್ಬಂದಿಗೆ ಬದಲಿ ಉದ್ಯೋಗ - ಹರ್ದೀಪ್ ಸಿಂಗ್ ಪುರಿ

18/07/2019


ನವದೆಹಲಿ, ಜು.18(ಹಿ.ಸ) - ಹಣಕಾಸಿನ ತೀವ್ರ ಬಿಕ್ಕಟ್ಟಿನಿಂದಾಗಿ  ವಾಯು ಯಾನವನ್ನು ಸ್ಥಗಿತಗೊಳಿಸಿರುವ ಜೆಟ್ ಏರ್ ವೇಸ್ ವಿಮಾನ ಯಾನ ಸಂಸ್ಥೆ ಸಿಬ್ಬಂದಿಗಳಿಗೆ ಬದಲೀ ಉದ್ಯೋಗ ಕಂಡುಕೊಳ್ಳಲು ಅನುಕೂಲವಾಗುವಂತೆ ನಾಗರಿಕ ವಿಮಾನಯಾನ ಸಚಿವಾಲಯವು ವೆಬ್ ಸೈಟ್ ಒಂದನ್ನು ರಚಿಸಿದೆ.
ಸ್ಪೈಸ್ ಜೆಟ್ ಮತ್ತು ಇಂಡಿಗೋ ಸೇರಿದಂತೆ ಇತರೇ ಖಾಸಗಿ ವಿಮಾನಯಾನ ಸಂಸ್ಥೆಗಳೊಂದಿಗೆ ಸಚಿವಾಲಯವು ಸಂಪರ್ಕದಲ್ಲಿದೆ. ಆ ಸಂಸ್ಥೆಗಳಲ್ಲಿ ಉದ್ಯೋಗ ಕಳೆದುಕೊಂಡಿರುವ ಜೆಟ್ ಏರ್ ವೇಸ್ ಸಿಬ್ಬಂದಿಗಳ ನೇಮಕಕ್ಕೆ ಪ್ರಯತ್ನಿಸುವುದಾಗಿ ಸಚಿವಾಲಯ ಭರವಸೆ ನೀಡಿದೆ.
ಬಾರತೀಯ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ (ತಿದ್ದುಪಡಿ) ಮಸೂದೆ, 2019ರ ಮೇಲೆ ಮಾತನಾಡುವ ಸಂದರ್ಭದಲ್ಲಿ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ರಾಜ್ಯಸಭೆಯಲ್ಲಿ ಸದಸ್ಯರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಈ ವಿಷಯವನ್ನು ತಿಳಿಸಿದ್ದಾರೆ.  ಸಚಿವಾಲಯವು ವೆಬ್ ಸೈಟ್ ಒಂದನ್ನು ರಚಿಸಿದ್ದು ಅದೀಗ ಕಾರ್ಯಾಚರಿಸಲು ಸಿದ್ಧವಾಗಿದೆ.


 
Top