विदेश

Blog single photo

ಕಾಬೂಲ್ ಶಾಲೆ ಸಮೀಪ ಬಾಂಬ್ ದಾಳಿ : 40 ಮಂದಿ ಮಾರಣ ಹೋಮ

08/05/2021

ಕಾಬೂಲ್, ಮೇ 8 : ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ  ಉಗ್ರರು‌ ಅಟ್ಟಹಾಸ ಮೆರೆದಿದ್ದಾರೆ.  ಇಲ್ಲಿನ ಶಾಲೆಯೊಂದರ‌ ಸಮೀಪ ಸಂಭವಿಸಿದ  ಬಾಂಬ್ ದಾಳಿಯಲ್ಲಿ 40 ಮಂದಿ ಸಾವನ್ನಪ್ಪಿದ್ದಾರೆ. ಆದರೆ  ಈ ದಾಳಿಯ ಹೊಣೆಯನ್ನು ಯಾವ ಉಗ್ರ ಸಂಘಟನೆಯೂ ಒಪ್ಪಿಕೊಂಡಿಲ್ಲ

ಮೃತರೆಲ್ಲರೂ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ ಎಂದು ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ವ 47 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.ಕೆಲವರ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತರ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಭೀತಿ ಎದುರಾಗಿದೆ.  ಬಾಂಬ್ ಸ್ಪೋಟ ಹಿನ್ನಲೆಯಲ್ಲಿ ಕಾಬೂಲ್ ನಲ್ಲಿ ವ್ಯಾಪಕ ಕಟ್ಟೆಚ್ಚರ ಕೈಗೊಳ್ಳಲಾಗಿದೆ.

2021ರ ಸೆಪ್ಟಂಬರ್ 11ರ ಒಳಗೆ ಅಮೆರಿಕ ತನ್ನ ಎಲ್ಲಾ ಸೇನೆಯನ್ನು ಹಿಂದಕ್ಕೆ  ಕರೆಸಿಕೊಳ್ಳುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಅಪ್ಘಾನಿಸ್ತಾನದಲ್ಲಿ ಬಾಂಬ್‌ ದಾಳಿ ಪ್ರಕರಣಗಳು ಹೆಚ್ಚಿವೆ. ಅಮೆರಿಕ ಘೋಷಣೆಯ ಬಳಿಕ ತಾಲಿಬಾನ್‌ ಉಗ್ರ ಸಂಘಟನೆ ದಾಳಿಯನ್ನು ಹೆಚ್ಚಿಸಿದೆ ಎಂದು ಆಪ್ಘನ್‌ ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ.


 
Top