मनोरंजन

Blog single photo

ಕೆಜಿಎಫ್ -2 ಚಿತ್ರಕ್ಕೆ ಮತ್ತೊಂದು ತಡೆ, ಕುಖ್ಯಾತ ರೌಡಿ ತಂಗಂ ತಾಯಿ ಪೌಳಿಯಿಂದ ದೂರು ದಾಖಲು

29/09/2019


ಬೆಂಗಳೂರು, ಸೆ.29 (ಹಿ.ಸ) - ಬೃಹತ್ ಬಜೆಟ್ ನ ಕನ್ನಡ ಚಿತ್ರ ಕೆಜಿಎಫ್ 2 ಚಿತ್ರೀಕರಣಕ್ಕೆ ಮತ್ತೂಂದು ಅಡ್ಡಿ ಎದುರಾಗುವ ಸಂಭವ ಇದೆ. ಕುಖ್ಯಾತ ರೌಡಿ ತಂಗಂನ ತಾಯಿ ಪೌಳಿ ಕೆಜಿಎಫ್ 2 ಚಿತ್ರೀಕರಣಕ್ಕೆ ತಡೆಯಾಜ್ಞೆ ನೀಡಬೇಕೆಂದು ಇಲ್ಲಿನ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆದರೆ, ತಡೆಯಾಜ್ಞೆ ನೀಡದ ನ್ಯಾಯಾಲಯ ವಿಜಯ ಕಿರದಂಗೂರು, ಪ್ರಶಾಂತ್‌, ಫಿಲ್ಮ್ ಚೇಂಬರ್‌ ಮತ್ತು ಬಿಜಿಎಂಎಲ್‌ ಸಿಎಸ್‌ಒ ಅವರಿಗೆ ಸಮನ್ಸ್‌ ಜಾರಿ ಮಾಡಿದೆ. ಕೆಜಿಎಫ್ ಚಿತ್ರವು ತನ್ನ ಮಗ ತಂಗಂ ಜೀವನವನ್ನು ಹೋಲುತ್ತಿದೆ. ಕೆಜಿಎಫ್ ಚಿತ್ರದಲ್ಲಿ ಅವನನ್ನು ಕೆಟ್ಟದಾಗಿ ತೋರಿಸಲಾಗಿದೆ. ಹೀಗಾಗಿ ಈ ಚಿತ್ರಕ್ಕೆ ತಡೆಯಾಜ್ಞೆ ನೀಡಬೇಕೆಂದು ಪೌಳಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಕುರಿತ ವಿಚಾರಣೆ ಅಕ್ಟೋಬರ್ 9ಕ್ಕೆ ನಡೆಯಲಿದೆ ಎಂದು ವಕೀಲ ಮಣಿವಣ್ಣನ್‌ ತಿಳಿಸಿದ್ದಾರೆ.
ಈ ಹಿಂದೆ ‘ಕೆಜಿಎಫ್​ 2’ ಚಿತ್ರತಂಡ ಕೋಲಾರದ ಕೆನಡೀಸ್​ ಸೈನೈಡ್​ ಗುಡ್ಡದಲ್ಲಿ ಚಿತ್ರೀಕರಣ ನಡೆಸದಂತೆ ಜೆಎಂಎಫ್​ಸಿ ನ್ಯಾಯಾಲಯ ತಡೆ ನೀಡಿತ್ತು. ಆದರೆ, ಈ ಆದೇಶವನ್ನು ಕರ್ನಾಟಕ ಹೈಕೋರ್ಟ್ ಏಕ ಸದಸ್ಯ ಪೀಠ ರದ್ದುಗೊಳಿಸಿತು.


 
Top