मनोरंजन

Blog single photo

ಪೈಲ್ವಾನ್ 5 ಭಾಷೆಗಳಲ್ಲಿ ಬಿಡುಗಡೆ - ನಾಲ್ಕು ಭಾಷೆಗಳಿಗೆ ಕಿಚ್ಚನ ಧ್ವನಿ

18/07/2019


ಬೆಂಗಳೂರು, ಜು.18 (ಹಿ.ಸ) - ಬಹುಭಾಷ ನಟ ಕಿಚ್ಚ ಸುದೀಪ್  ಅವರ ಮುಂದಿನ ಚಿತ್ರ ಪೈಲ್ವಾನ್ 5 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ನಾಲ್ಕು ಭಾಷೆಗಳಿಗೆ ಸ್ವತಃ ಸುದೀಪ್ ಅವರೇ ಡಬ್ ಮಾಡಿದ್ದಾರೆ. ಆದರೆ ಮಲಯಾಳಂ ನಲ್ಲಿ ಮಾತ್ರ ಸುದೀಪ್ ಧ್ವನಿ ಕೇಳುವುದಿಲ್ಲ. 
ಸುದೀಪ್ ಗೆ ಮಲಯಾಳಂ ಭಾಷೆಯನ್ನು ನಿರರ್ಗಳವಾಗಿ ಮಾತನಾಡಲು ಬರುವುದಿಲ್ಲ. ಹೀಗಾಗಿ ಸುದೀಪ್ ಮಲಯಾಳಂ ನಲ್ಲಿ ಡಬ್ ಮಾಡಲು ಯತ್ನಿಸಿಲ್ಲ. 
ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಮಾತ್ರವೇ ಸುದೀಪ್ 
ಪೈಲ್ವಾನ್ ಗೆ ಧ್ವನಿ ನೀಡಿದ್ದಾರೆ. ಪೈಲ್ವಾನ್ ಸಿನಿಮಾ ಪ್ರಚಾರದ ಸಂದರ್ಭದಲ್ಲಿ ಸ್ವತಃ ಸುದೀಪ್ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. 


 
Top