राष्ट्रीय

Blog single photo

ಕೇಂದ್ರ ಸರ್ಕಾರಿ ನೌಕರ ನಿವೃತ್ತಿ 60 ರಿಂದ 58ಕ್ಕೆ ಇಳಿಕೆ ಇಲ್ಲ - ಜಿತೇಂದ್ರ ಸಿಂಗ್

29/11/2019


ನವದೆಹಲಿ, ನ.29 (ಹಿ.ಸ) - ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು ಕಡಿತಗೊಳಿಸುವ ಬಗ್ಗೆ ಕೇಂದ್ರ ಸರ್ಕಾರ ಮಹತ್ವದ ನಿಲುವು ಪ್ರಕಟಿಸಿದೆ.  ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60 ರಿಂದ 58 ವರ್ಷಕ್ಕೆ ಇಳಿಸಲು ಮೋದಿ ಸರ್ಕಾರ ಯೋಜಿಸುತ್ತಿದೆ ಎಂಬ ವದಂತಿಯನ್ನು ಕೇಂದ್ರ ಸರ್ಕಾರ ಅಲ್ಲಗಳೆದಿದೆ. ಅಲ್ಲದೆ, ಅಂತಹ ಯಾವುದೇ ನೀತಿ ನಿರ್ಧಾರಗಳಿಲ್ಲ ಎಂದು ಸಂಸತ್ತಿನಲ್ಲಿ ಸ್ಪಷ್ಟಪಡಿಸಿದೆ. ಪ್ರಧಾನಿ ಕಚೇರಿಯಲ್ಲಿ (ಪಿಎಂಒ) ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸಿನ ಬಗ್ಗೆ ಮೋದಿ ಸರ್ಕಾರದ ನಿಲುವನ್ನು ಪ್ರಕಟಿಸಿದರು. ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60 ವರ್ಷದಿಂದ 58 ವರ್ಷಕ್ಕೆ ಇಳಿಸಲು ಸರ್ಕಾರದ ಮುಂದೆ ಯಾವುದೇ ಪ್ರಸ್ತಾಪವಿದೆಯೇ ಅಥವಾ ಕಡ್ಡಾಯ ನಿವೃತ್ತಿಯ 56 (ಜೆ) ಕಲಂ ಅಡಿಯಲ್ಲಿ 50 ವರ್ಷ ದಾಟಿದವರಿಗೆ ಕಡ್ಡಾಯ ನಿವೃತ್ತಿ ಬಗೆಗೆ ಯಾವುದೇ ಪ್ರಸ್ತಾಪವಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಿತೇಂದ್ರ ಸಿಂಗ್ ಅವರು, ನವೆಂಬರ್ 27 ರಂದು ಲೋಕಸಭೆಯಲ್ಲಿ ಉತ್ತರಿಸುತ್ತಾ, ಪ್ರಸ್ತುತ, ನಿವೃತ್ತಿ ವಯಸ್ಸನ್ನು 60 ವರ್ಷದಿಂದ 58 ವರ್ಷಕ್ಕೆ ಇಳಿಸುವ ಪ್ರಸ್ತಾಪವಿಲ್ಲ ಎಂದು ಸ್ಪಷ್ಟಪಡಿಸಿದರು.


 
Top