ट्रेंडिंग

Blog single photo

ಸರ್ಕಾರಿ ನೌಕರರು ಜಿಲ್ಲೆಯ ಪ್ರಗತಿ ಸಹಕರಿಸಲು ಕರೆ

02/12/2019


ಸರ್ಕಾರಿ ನೌಕರರು ಜಿಲ್ಲೆಯ ಪ್ರಗತಿ ಸಹಕರಿಸಲು ಕರೆ

ಕೋಲಾರ  ಡಿ. 2 (ಹಿ.ಸ) :  ನ್ಯಾಯಾಂಗ, ಶಾಸಕಾಂಗ ಮತ್ತು ಕಾಯಾರ್ಂಗದ ನಡುವೆ ಸಮನ್ವಯತೆ ಇರಬೇಕು. ಇದೇ ರೀತಿಯಲ್ಲಿ ಜಿಲ್ಲೆಯ ಪ್ರಗತಿಗೆ ಸರ್ಕಾರಿ ನೌಕರರು ಸಹಕಾರ ಮುಖ್ಯ ಎಂದು ಜಿಲ್ಲಾ ಪಂಚಾಯತ್ ನೂತನ ಅಧ್ಯಕ್ಷ ಸಿ ಎಸ್ ವೆಂಕಟೇಶ್ ತಿಳಿಸಿದರು 
    ನಗರದ ಸರ್ಕಾರಿ ನೌಕರರ ಭವನದಲ್ಲಿ ಇಂದು ಸಂಜೆ ಸರ್ಕಾರಿ ನೌಕರರ ಸಂಘವು ನೀಡಿದ ಆತ್ಮೀಯ ಸನ್ಮಾನ ಸ್ವೀಕರಿಸಿ ಮಾತನಾಡಿದರು. 
    ಸರ್ಕಾರಿ ನೌಕರರು ಸಾರ್ವಜನಿಕರಿಗೆ ಸ್ಪಂದಿಸುವ  ಸಮಾಜದ ಅಭಿವೃದ್ಧಿಗೆ ಪೂರಕÀವಾಗಿ ಸಮರ್ಪಣಾ ಮನೋಭಾವದಿಂದ ದುಡಿಯಬೇಕು. ಎಲ್ಲ ಇಲಾಖೆಗಳಲ್ಲಿ ಇರುವ ಸಮಸ್ಯೆಗಳನ್ನು ಪರಿಹಾರ ಮಾಡುವ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. 
  ಸರ್ಕಾರಿ ನೌಕರರ ಸಂಘವು ಯಾವುದೇ ಸಂದರ್ಭದಲ್ಲಿ ತಮ್ಮನ್ನು ಸಂಪರ್ಕಿಸುವಂತೆ ಸಹಕಾರ ನೀಡುವುದಾಗಿ ಮತ್ತು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದಾಗಿ ತಿಳಿಸಿದರು 
    ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ ಬಿ ಅಶೋಕ್ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲೆಯ ಸಮಸ್ತ ನೌಕರರ ನೂತನ ಅಧ್ಯಕ್ಷರ ಮೇಲೆ ಅಭೂತಪೂರ್ವ ವಿಶ್ವಾಸವನ್ನು ಇರಿಸಿಕೊಂಡಿದ್ದು ನೌಕರರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಮನೋಭಾವವನ್ನು ಹೊಂದಿರಬೇಕು ಎಂದರು 
    ಈ ಸಂದರ್ಭದಲ್ಲಿ ಜಿಲ್ಲಾ ಸರ್ಕಾರಿ ನೌಕರ ಸಂಘದ ಗೌರವಾಧ್ಯಕ್ಷ ಅನಿಲ್ ಕುಮಾರ್, ಉಪಾಧ್ಯಕ್ಷ ಜಿ. ಶ್ರೀನಿವಾಸ್. ಬಂಗವಾದಿ ನಾಗರಾಜ್ ನಂದೀಶ್,ಕಾರ್ಯದರ್ಶಿ ಮುರಳಿಮೋಹನ್, ಮುಖಂಡರಾದ ಆರ್ ಶ್ರೀನಿವಾಸನ್, ಸದಾಶಿವ ರೆಡ್ಡಿ, ಕೆಟಿ ನಾಗರಾಜ್, ವೆಂಕಟೇಶ್ ಬಾಬು ,ರವಿಚಂದ್ರ ನಾಯ್ಡು, ಭಾಗವಹಿಸಿದ್ದರು.

ಚಿತ್ರ : ಕೋಲಾರದ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಜಿಲ್ಲಾ ಪಂಚಾಯಿತಿ ನೂತನ ಅಧ್ಯಕ್ಷ ವೆಂಕಟೇಶ್ ರವರನ್ನು ಅಭಿನಂದಿಸಲಾಯಿತು.


 
Top