व्यापार

Blog single photo

ಭಾರತದಲ್ಲಿ 200 ಕಾರುಗಳನ್ನು ಮಾರಾಟ ಮಾಡಿದ ಮರ್ಸಿಡಿಸ್ ಬೆಂಜ್

09/10/2019


ನವದೆಹಲಿ, ಅ.09 (ಹಿ.ಸ) - ಈ ಬಾರಿಯ ದಸರಾ ಹಬ್ಬದ ವೇಳೆಯಲ್ಲಿ  ವಿಶ್ವದ ನಂಬರ್ ವನ್ ಐಶಾರಾಮಿ ಕಾರು ತಯಾರಿಕಾ ಕಂಪನಿ ಮರ್ಸಿಡಿಸ್ ಬೆಂಜ್ ಭಾರತದಲ್ಲಿ ಬರೊಬ್ಬರಿ 200ಕ್ಕೂ ಅಧಿಕ ಕಾರುಗಳನ್ನು ಮಾರಾಟ ಮಾಡಿರುವುದಾಗಿ ಹೇಳಿದೆ. 
ಮುಂಬೈ ಹಾಗು ಗುಜರಾತ್ ನ ಗ್ರಾಹಕರು ಮರ್ಸಿಡಿಸ್ ಬೆಂಜ್ ಕಾರುಗಳನ್ನು ಖರೀದಿಸುವ ಮೂಲಕ ಕಳೆದ ವರ್ಷದ ಮಾರಾಟವನ್ನು ಮೀರಿಸಿದೆ ಎಂದು ಜರ್ಮನ್ ಕಾರು ತಯಾರಿಕಾ ಕಂಪನಿಯಾದ ಮರ್ಸಿಡಿಸ್ ಬೆಂಜ್ ಮಾಹಿತಿ ನೀಡಿದೆ. ವಾಣಿಜ್ಯ ನಗರಿ ಮುಂಬೈಯಲ್ಲಿಯೇ 125 ಮರ್ಸಿಡಿಸ್ ಬೆಂಜ್ ಕಾರುಗಳು ಮಾರಾಟವಾದರೆ, ಗುಜರಾತ್ ನಲ್ಲಿ  74 ಕಾರುಗಳನ್ನು ನೊಂದಣಿ ಮಾಡಿರುವುದಾಗಿ ಕಂಪನಿ ತಿಳಿಸಿದೆ. ವೈದ್ಯರು, ಚಾರ್ಟರ್ಡ್ ಅಕೌಂಟೆಂಟ್ಸ್, ವಕೀಲರು ಹಾಗು ಉದ್ಯಮಿಗಳು ಐಶಾರಾಮಿ ಮರ್ಸಿಡಿಸ್ ಬೆಂಜ್ ಕಾರುಗಳನ್ನು ಖರೀದಿಸಿದ ಗ್ರಾಹಕರಾಗಿದ್ದಾರೆ. ಈ ವೇಳೆ ಮಾತನಾಡಿದ ಕಂಪನಿ ಆಡಳಿತ ನಿರ್ದೇಶಕ ಹಾಗು ಸಿಇಓ ಮಾರ್ಟಿನ್ ಶೈವೆಂಕ್, ಗ್ರಾಹಕರ ಪ್ರೀತಿ, ವಿಶ್ವಾಸದಿಂದಾಗಿ  ಮುಂಬೈ ಮತ್ತು ಗುಜರಾತ್ ನ ಗ್ರಾಹಕರು 200ಕ್ಕೂ ಅಧಿಕ ಮರ್ಸಿಡಿಸ್ ಬೆಂಜ್ ಕಾರುಗಳನ್ನು ಖರೀದಿಸಿದ್ದಾರೆ. 2018ಕ್ಕೆ ಹೋಲಿಸಿದರೆ ಈ ವರ್ಷದ ಮಾರಾಟದಲ್ಲಿ ಹೆಚ್ಚಳ ಕಂಡಿದೆ ಎಂದು ಹೇಳಿದರು.


 
Top