मनोरंजन

Blog single photo

ಶೋಲೆ ಹಿಂದಿ ಚಿತ್ರದ ಕಾಲಿಯಾ ಪಾತ್ರಧಾರಿ ಇನ್ನಿಲ್ಲ

30/09/2019


ಮುಂಬೈ,ಸೆ.30 (ಹಿ.ಸ) - ಬಾಲಿವುಡ್ ಹಿರಿಯ ನಟ ಶೋಲೆ ಸಿನಿಮಾದ ಕಾಲಿಯಾ ಪಾತ್ರಧಾರಿ ವಿಜು ಖೋಟೆ(78) ಇಂದು ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.  ದೀರ್ಘಾವಧಿಯಿಂದ ಅನಾರೋಗ್ಯಕ್ಕೊಳಗಾಗಿದ್ದ ವಿಜು ಖೋಟೆ ಅವರು ಇಂದು ಮುಂಬೈಯಲ್ಲಿನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿರುವುದಾಗಿ ವರದಿ ತಿಳಿಸಿದೆ. ಅಂದಾಜ್ ಅಪ್ನಾ, ಅಪ್ನಾ ಸಿನಿಮಾದಲ್ಲಿ ಐತಿಹಾಸಿಕ (ರಾಬರ್ಟ್) ನಟನೆಯ ಮೂಲಕ ಖ್ಯಾತಿ ಗಳಿಸಿದ್ದ ವಿಜು ಖೋಟೆ ಬಳಿಕ ಅಭಿತಾಬ್ ನಟನೆಯ ಶೋಲೆ ಸಿನಿಮಾದಲ್ಲಿಯೂ ಕಾಲಿಯಾ ಪಾತ್ರಧಾರಿಯಾಗಿ ಜನಪ್ರಿಯತೆ ಪಡೆದಿದ್ದರು.
ಭಾರತೀಯ ಸಿನಿಮಾರಂಗದ ಅತ್ಯಂತ ಹೆಚ್ಚು ಸ್ಮರಣೀಯ ಪಾತ್ರಗಳಲ್ಲಿ ವಿಜು ಖೋಟೆಯ ಕಾಲಿಯಾ ಪಾತ್ರ.  ರಮೇಶ್ ಸಿಪ್ಪಿ ನಿರ್ದೇಶನದ ಶೋಲೆ ಸಿನಿಮಾದಲ್ಲಿ ಎರಡು ಸೀನ್ಸ್ ಗಳಲ್ಲಿ “ಕಾಲಿಯಾ” ನಟಿಸಿದ್ದರು.  ಶೋಲೆಯಲ್ಲಿ ಅಮ್ಜದ್ ಖಾನ್ ಗಬ್ಬರ್ ಸಿಂಗ್ ಆಗಿ ಮೆರೆದಿದ್ದರೆ, ವಿಜು ಖೋಟೆ ಕಾಲಿಯಾ ಆಗಿ ಜನಾನುರಾಗಿಯಾಗಿರುವುದು ದಾಖಲೆಯಾಗಿದೆ.
ಮರಾಠಿ, ಬಾಲಿವುಡ್ ಸೇರಿದಂತೆ 300ಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿದ್ದ ವಿಜು ಖೋಟೆ ಅವರು, ಟಿವಿ ಶೋಗಳಲ್ಲಿಯೂ ನಟಿಸಿದ್ದರು. ಇಂದು ಬೆಳಗ್ಗೆ 11ಗಂಟೆಗೆ ಖೋಟೆ ಅವರ ಅಂತ್ಯ ಸಂಸ್ಕಾರ ನಡೆಯಲಿದೆ. 


 
Top