आर्थिक

Blog single photo

ಅಗತ್ಯ ವಸ್ತುಗಳ ಹೆಚ್ಚಿನ ದರಕ್ಕೆ ಮಾರಾಟ : ಎಂಟು ಅಂಗಡಿ ಮಾಲಿಕರ ಮೇಲೆ ಪ್ರಕರಣ ದಾಖಲು

30/04/2021

ಗದಗ, ಏ.30 (ಹಿ.ಸ) : ಗದಗ ಜಿಲ್ಲೆಯ ಆಹಾರ, ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ವಿಠ್ಠಲರಾವ್ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಆರ್.ಕೆ.ಕೊಪ್ಪದ ಹಾಗೂ ಸಿಬ್ಬಂದಿಗಳು ಜಂಟಿಯಾಗಿ ಗದಗ ಶಹರದ ಗ್ರೇನ್ ಮಾರ್ಕೇಟ ಹಾಗೂ ನಾಮ್ ಜೋಶಿ ರಸ್ತೆಯಲ್ಲಿರುವ ಕಿರಾಣಿ ಅಂಗಡಿಳಲ್ಲಿ ತಪಾಸಣೆ ನಡೆಸಿ ಹೆಚ್ಚುವರಿ ದರ ಪಡೆಯುತ್ತಿದ್ದ ಹಾಗೂ ಪೊಟ್ಟಣ ಸಾಮಗ್ರಿಗಳ ಮೇಲೆ ನಿಗದಿತ ಘೋಷಣೆ ಇಲ್ಲದೆ ಇರುವ 8 ಅಂಗಡಿಗಳ ಮಾಲೀಕರ ಮೇಲೆ ಶುಕ್ರವಾರ ಮೊಕದ್ದಮೆ ದಾಖಲು ಮಾಡಿದ್ದಾರೆ. 


ಯಾರಾದರೂ ಅಗತ್ಯ ವಸ್ತುಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಪ್ರವೃತ್ತಿಯನ್ನು ಮುಂದುವರೆಸಿದ್ದಲ್ಲಿ ಅಂತಹವರ ಮೇಲೆ ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದುಸ್ತಾನ್ ಸಮಾಚಾರ/ಎಸಕೆ/ಎಂವೈ


 
Top