ट्रेंडिंग

Blog single photo

ಕೋಲಾರದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಜಾಥಾ

01/12/2019

ಕೋಲಾರ,ಡಿ.1(ಹಿ.ಸ): ಆಧುನಿಕ ಜೀವನ ಶೈಲಿಯ ಪ್ರಭಾವಕ್ಕೆ ಒಳಗಾಗಿರುವ ಯುವಜನತೆ ಏಡ್ಸ್‍ನಂತಹ ಮಹಾಮಾರಿಗೆ ಬಲಿಯಾಗುತ್ತಿರುವುದು ಕಳವಳಕಾರಿಯಾದ ಸಂಗತಿ ಎಂದು ಕವಿ ಡಾ. ಶರಣಪ್ಪ ಗಬ್ಬೂರ್ ಅಭಿಪ್ರಾಯ ಪಟ್ಟರು.

ಕೋಲಾರ ನಗರದ ಬಸ್ ನಿಲ್ದಾಣದಲ್ಲಿ ಈ ನೆಲ ಈ ಜಲ ಕಲೆ ಮತ್ತು ಸಾಂಸ್ಕತಿಕ ಸಂಸ್ಥೆ ಮತ್ತು ಶಾಂತಿ ಸೌಹಾರ್ದಾ ಕ್ರೀಡೆ ಮತ್ತು ಸಾಂಸ್ಕತಿಕ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಏಡ್ಸ್ ದಿನಾಚರಣೆಯಲ್ಲಿ ಮಾತಾನಾಡಿದರು.

ವಿದ್ಯಾರ್ಥಿ ಜೀವನದಲ್ಲಿ ಉತ್ತಮ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಹೊರಹೊಮ್ಮಬೇಕು. ವ್ಯಕ್ತಿಯ ಬದುಕಿಗೆ ಪೆಡಂಬೂತವಾಗಿ ಕಾಡುತ್ತಾ ಜೀವನವನ್ನೇ ಆಹುತಿ ತೆಗೆದುಕೊಳ್ಳುವ ಇಂತಹ ಮಾರಕ ರೋಗದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ವಿಶ್ವ ಏಡ್ಸ್ ದಿನದ ಪರಮೋಚ್ಚ ಧ್ಯೇಯ ಎಂದರು.

ವಕ್ಕಲೇರಿ ಗ್ರಾಮ ಪಂಚಾಯಿತಿಯ ಸದಸ್ಯ ಸ್ಟ್ರಗಲ್ ಮಂಜು ಮಾತನಾಡಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಎ.ಆರ್.ಟಿ.ಸಿ. ಸೆಂಟರ್‍ನ ವಿಶೇಷ ಮೇಲ್ವಿಚಾರಕರಾದ ಆಪ್ತ ಸಮಾಲೋಚನೆ ಅಧಿಕಾರಿಗಳ ಮೂಲಕ ಎಚ್.ಐ.ವಿ ಬಗ್ಗೆ ಅರಿವು ಪಡೆದುಕೊಂಡು ಜಾಗೃತರಾಗಬೇಕು. ಎಚ್.ಐ.ವಿ. ಪೀಡಿತರನ್ನು ಮಾನವೀಯತೆಯ ದೃಷ್ಠಿಯಿಂದ ಕಾಣಬೇಕು.  ಅವರಲ್ಲಿ ನೈತಿಕ ಸ್ಥೈರ್ಯ ತುಂಬಬೇಕು. ಈನೆಲ ಈಜಲ ಸಂಸ್ಥೆಯು ಸಮಾಜದಲ್ಲಿ ಉತ್ತಮ ರೀತಿಯ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಶ್ಲಾಘನೀಯ ಹಾಗೂ  ಸುರಕ್ಷಿತ ಲೈಂಗಿಕ ಕ್ರಿಯೆಗಾಗಿ ಕಾಂಡೊಮ್ ತಪ್ಪದೇ ಬಳಸುವಂತೆ ತಿಳಿಸಿದರು.
ಕಲಾವಿದೆ ಎಚ್ ಶಾಂತಮ್ಮ ಮಾತಾನಾಡಿ ಏಡ್ಸ್ ಕಾಯಿಲೆಯಿಂದ ಉಂಟಾಗುವ ತೊಂದರೆ ಹಾಗೂ ಜೀವ ಹಾನಿಯ ಕುರಿತು ಸಾರ್ವಜನಿಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು ಎಂದರು.

ಈನೆಲ ಈಜಲ ವೆಂಕಟಾಚಲಪತಿ ಮಾತಾನಾಡಿ ಮಕ್ಕಳು, ಹದಿಹರೆಯರು, ವೃದ್ಧರು ಎಂಬಯಾವ ಬೇಧವಿಲ್ಲದೆ ಮಾನವನ ದೇಹಕ್ಕೆ ಒಕ್ಕರಿಸಿ ಆರೋಗ್ಯವನ್ನು ಹಿಂಡಿ ಹಿಪ್ಪೆಯಾಗಿಸಿ ಬಿಡುತ್ತದೆ. ಮನುಕುಲದ ನೆಮ್ಮದಿ ಕೆಡಿಸುವ ಬಗ್ಗೆ ಪ್ರಪಂಚದ್ಯಾದಂತ ಮುಂಜಾಗ್ರತಾ ಅಭಿಮಾನ ಕೈಗೊಳ್ಳಬೇಕೆಂದು ಹೇಳಿದರು. 

ಸಮಾರಂಭದಲ್ಲಿ ಏಡ್ಸ್ ಬಗ್ಗೆ ಜಾಗೃತಿ ಗೀತೆಗಳನ್ನು ಹಾಡಿ ಅರಿವು ಮೂಡಿಸಿದರು. ಇದೇ ಸಂದರ್ಭದಲ್ಲಿ ಭಾಗವಹಿಸಿದ್ದ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಂದ ಏಡ್ಸ್ ಕುರಿತು ಜಾಗೃತಿ ಮೂಡಿಸುವ ಕುರಿತು ಪ್ರಮಾಣ ವಚನವನ್ನು ವೆಂಕಟಾಚಲಪತಿ ಬೋದಿಸಿದರು.

ಕಾರ್ಯಕ್ರಮದಲ್ಲಿ ಎಂ. ಶೈಲಜ, ಡಾ. ವೇಣುಗೋಪಾಲ ಕೃಷ್ಣ ನಾಯಕ್, ಮಧು, ನಾರಾಯಣಸ್ವಾಮಿ, ಗಂಗಾಧರ್, ವಕೀಲರಾದ ಕೆಂಬೋಡಿ ನಾರಾಯಣಸ್ವಾಮಿ ಪಾಲ್ಗೊಂಡಿದ್ದರು.

ಚಿತ್ರ : ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಕೋಲಾರದಲ್ಲಿ ಈನೆಲ ಈಜಲ ಕಲೆ ಮತ್ತು ಸಾಂಸ್ಕøತಿಕ ಸಂಸ್ಥೆಯ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.


 
Top