अंतरराष्ट्रीय

Blog single photo

ಒಡತಿ ಮೇಲೆ ಗುಂಡು ಹಾರಿಸಿದ ಏಳು ತಿಂಗಳ ಸಾಕು ನಾಯಿ

09/10/2019


ಒಕ್ಲಾಹೋಮಾ, ಅ.09 (ಹಿ.ಸ) - ಏಳು ತಿಂಗಳ ಸಾಕು ನಾಯಿಯೊಂದು ತನ್ನ ಒಡತಿಯನ್ನೇ ಶೂಟ್ ಮಾಡಿದ ಅಪರೂಪದ ಘಟನೆ ಅಮೆರಿಕಾದ ಒಕ್ಲಾಹೋಮಾ ನಗರದಲ್ಲಿ ಇತ್ತೀಚೆಗೆ ನಡೆದಿದೆ. ಗುಂಡೇಟು ತಿಂದ ಮಹಿಳೆ ಆಸ್ಪತ್ರಗೆ ದಾಖಲಾಗಿದ್ದಾರೆ. ಒಕ್ಲಾಹೋಮಾ ನಗರದ ನಿವಾಸಿ ಟೀನಾ ತನ್ನ ಚಾಲಕನೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಅವರ ಸಾಕು ನಾಯಿ ‘ಮೊಲಿ’ ಹಿಂದಿನ ಸೀಟಿನಲ್ಲಿ ಕುಳಿತಿತ್ತು. ಆ ವೇಳೆಯಲ್ಲಿ ದಾರಿ ಮಧ್ಯೆ ರೈಲ್ವೆ ಕ್ರಾಸಿಂಗ್ ಇದ್ದ ಕಾರಣ ಕಾರನ್ನು ನಿಲ್ಲಿಸಿದ್ದರು.  ಎದುರಿನ ಸೀಟಿನ ನಡುವೆ ಗುಂಡು ತುಂಬಿದ್ದ 0.22 ಕ್ಯಾಲಿಬರ್ ಹ್ಯಾಂಡ್ ಗನ್ ಇಡಲಾಗಿತ್ತು. ರೈಲಿನ ಸದ್ದನ್ನು ಕೇಳಿದ ‘ಮೊಲಿ’ ಗಾಬರಿಗೊಂಡು  ಒಡತಿ ಇದ್ದ ಎದುರಿನ ಸೀಟಿಗೆ ಹಾರಿದೆ. ಈ ವೇಳೆ ‘ಮೊಲಿ’ ಕಾಲು ತಾಗಿ ಹ್ಯಾಂಡ್ ಗನ್ ನಿಂದ ಗುಂಡು ಹಾರಿದ್ದು, ಅದು ಟೀನಾ ಅವರ ಎಡತೊಡೆಯನ್ನು ಸೀಳಿದೆ. ಈ ವೇಳೆ ಟೀನಾ ಅವರಿಗೆ ತೀವ್ರ ರಕ್ತಸ್ರಾವವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.


 
Top