ट्रेंडिंग

Blog single photo

ಕೋವಿಡ್ ಕೇರ್ ಸೆಂಟರ್ ನಲ್ಲಿ ಉಸಿರಾಟದ ಸಮಸ್ಯೆಯಿಂದ ನಾಲ್ಕು ಜನರ ಸಾವು

04/05/2021

ಚಿತ್ರದುರ್ಗ,ಮೇ 04(ಹಿ.ಸ) : ಕೋಟೆ ನಾಡು ಚಿತ್ರದುರ್ಗದಲ್ಲಿ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದು ನಾಲ್ಕು ಜನರು ಉಸಿರಾಟದ ಸಮಸ್ಯೆಯಿಂದಾಗಿ ಸಾವನ್ನಪ್ಪಿದ್ದಾರೆ.


ಜಿಲ್ಲಾ ಕೋವಿಡ್ ಕೇರ್ ಸೆಂಟರ್ ನಲ್ಲಿ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದ ನಾಲ್ಕು ಜನರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ ನಿನ್ನೆ ರಾತ್ರಿಯಿಂದ ಸಮಸ್ಯೆ ಉಲ್ಬಣಿಸಿದ್ದು, ನಾಲ್ಕು ಜನರು ಕೂಡ ಮೃತಪಟ್ಟಿದ್ದಾರೆ. 

ಮೃತರನ್ನು ವನಜಾಕ್ಷಿ 50, ಹಿರಿಯೂರು ತಾಲೂಕಿನ ಯಲಗೊಂಡನಹಳ್ಳಿಗ್ರಾಮದವರು,ಚಿತ್ರದುರ್ಗ ನಗರದ ಕೆಹೆಚ್ ಬಿ ಕಾಲೋನಿಯ ಓಂಕಾರಮ್ಮ 50,ಸಿದ್ದೇಶ್ 38 ಚೇಳುಗುಡ್ಡದ ವಾಸಿ,
ಶಿವಕುಮಾರ್ 50 ವರ್ಷದ ರಾಂಪುರ ಗ್ರಾಮದ ಮೊಳಕಾಲ್ಮೂರಿನವರು
ಪ್ರಸನ್ನ ಕುಮಾರ್ 35 , ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಗ್ಯಾರೇಹಳ್ಳಿಗ್ರಾಮದವರು ಎಂದು ಜಿಲ್ಲಾ ಸರ್ಜನ್ ಡಾ. ಬಸವರಾಜ್ ತಿಳಿಸಿದ್ದಾರೆ. 

ಹಿಂದೂಸ್ತಾನ್ ಸಮಾಚಾರ್/ಪ್ರಬಿ/ಎಂವೈ


 
Top