राष्ट्रीय

Blog single photo

ರಾಮಜನ್ಮಭೂಮಿ - ಬಾಬ್ರಿ ಮಸೀದಿ ವಿವಾದ - ಸಂಧಾನ ಪರಿಹಾರ ಕಂಡು ಹಿಡಿಯಲು ಜುಲೈ 31ವರೆಗೆ ಅವಕಾಶ ನೀಡಿದ ಸುಪ್ರೀಂ ಕೋರ್ಟ್

18/07/2019


ನವದೆಹಲಿ,ಜು.18 (ಹಿ.ಸ) -  ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ವಿವಾದದಲ್ಲಿ ಸಂಧಾನದ ಪರಿಹಾರವನ್ನು ಕಂಡುಹಿಡಿಯಲು ಜುಲೈ 31 ರವರೆಗೆ ವಿಚಾರಣೆ ಮುಂದುವರಿಸಿ, ಮೇಲ್ಮನವಿಗಳ ವಿಚಾರಣೆಗೆ ಆಗಸ್ಟ್ 2 ಅಥವಾ ನಂತರ ದಿನಾಂಕಗಳನ್ನು ತಾತ್ಕಾಲಿಕವಾಗಿ ನಿಗದಿಪಡಿಸುವಂತೆ ಮಾಜಿ ನ್ಯಾಯಮೂರ್ತಿ ಎಫ್ ಎಂ ಐ ಖಲಿಫುಲ್ಲಾ ನೇತೃತ್ವದ ಅಯೋಧ್ಯಾ ಮಧ್ಯಸ್ಥಿಕೆ ತಂಡಕ್ಕೆ ಸುಪ್ರೀಂ ಕೋರ್ಟ್ ಇಂದು ಆದೇಶ ನೀಡಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐವರು ನ್ಯಾಯಾಧೀಶರನ್ನೊಳಗೊಂಡ ಸಾಂವಿಧಾನಿಕ ಪೀಠ ಮಧ್ಯಸ್ಥಿಕೆ ತಂಡ ಸಲ್ಲಿಸಿದ ವರದಿಯನ್ನು ಪರಿಶೀಲಿಸಿ ಅದರಲ್ಲಿನ ವಿಚಾರಗಳನ್ನು ಗಮನಿಸಿ ಜುಲೈ 31ರವರೆಗೆ ಸಂಧಾನ ಮುಂದುವರಿಸುವಂತೆ ಸೂಚಿಸಿದೆ. ವಿವಾದದ ಬಗ್ಗೆ ವಿಚಾರಣೆಯ ಸ್ಥಿತಿ ವರದಿಯನ್ನು ಸಲ್ಲಿಸಿ ಮುಂದಿನ ವಿಚಾರಣೆ ಆಗಸ್ಟ್ 2 ರಂದು ನಡೆಸಿ ಆಗ ಮುಂದಿನ ದಿನನಿತ್ಯದ ವಿಚಾರಣೆ ಹೇಗೆ ಮುಂದುವರಿಯುತ್ತದೆ ಎಂಬುದನ್ನು ತಿಳಿಸುವಂತೆ ನ್ಯಾಯಾಧೀಶರ ತಂಡಕ್ಕೆ ಸುಪ್ರೀಂ ಕೋರ್ಟ್ ಹೇಳಿದೆ.
ಮಧ್ಯಸ್ಥಿಕೆ ತಂಡ ಸಲ್ಲಿಸಿದ ವರದಿಯನ್ನು ಕೂಲಂಕಷವಾಗಿ ಓದಿದ ಬಳಿಕ ಸಾಂವಿಧಾನಿಕ ಪೀಠ, ಈ ಹಿಂದೆ ನೀಡಿದ್ದ ಆದೇಶದಂತೆ ಇದರಲ್ಲಿನ ವಿಷಯಗಳನ್ನು ಗೌಪ್ಯವಾಗಿಡಲಾಗುವುದು ಎಂದು ಹೇಳಿದೆ.
ಮಧ್ಯಸ್ಥಿಕೆ ತಂಡ ಸಲ್ಲಿಸಿದ ವರದಿಯಲ್ಲಿ ನಮ್ಮ ಗಮನಕ್ಕೆ ಬಂದಿರುವ ವಿಷಯಗಳನ್ನು ತೆಗೆದುಕೊಂಡಾಗ ಪ್ರಕರಣದ ವಿಚಾರಣೆಗೆ ದಿನಾಂಕವನ್ನು ಆಗಸ್ಟ್ 2 ಅಥವಾ ಅದರ ನಂತರ ನಿಗದಿಪಡಿಸಲಾಗುವುದು ಎಂದು ಸಾಂವಿಧಾನಿಕ ಪೀಠ ತಿಳಿಸಿದೆ.
ಜುಲೈ 31ರವರೆಗೆ ವಿಚಾರಣೆಯಲ್ಲಿ ಯಾವ ವಿಚಾರಗಳು ಚರ್ಚೆಗೆ ಬಂದವು ಎಂಬುದರ ಬಗ್ಗೆ   ಆಗಸ್ಟ್ 1ರೊಳಗೆ ಮಾಹಿತಿ ನೀಡುವಂತೆ ಸಹ ಮಧ್ಯಸ್ಥಿಕೆ ತಂಡಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.


 
Top