ट्रेंडिंग

Blog single photo

ವ್ಯಾಸರಾಜರ ವೃಂದಾವನ ಧ್ವಂಸ ಪ್ರಕರಣ - ಪೇಜಾವರ ಶ್ರೀ, ಮಂತ್ರಾಲಯ ಶ್ರೀಗಳಿಂದ ಖಂಡನೆ

18/07/2019


ಕೊಪ್ಪಳ, ಜು.18 (ಹಿ.ಸ) - ಕೊಪ್ಪಳ ಜಿಲ್ಲೆ ಪ್ರಸಿದ್ಧ ಐತಿಹಾಸಿಕ ಸ್ಥಳ ಆನೆಗುಂದಿಯಲ್ಲಿರುವ  ನವ ವೃಂದಾವನದಲ್ಲಿ ವ್ಯಾಸರಾಜರ ವೃಂದಾವನವನ್ನು ಧ್ವಂಸ ಗೊಳಿಸಿರುವ ಬಗ್ಗೆ ಮಾದ್ವ ಮಠಾಧಿಶರಾದ ಪೇಜಾವರ ಶ್ರೀಗಳು, ಮಂತ್ರಾಯಲ ಮಠಾಧೀಶರು ಸೇರಿ ಅನೇಕ ಸ್ವಾಮೀಜಿಗಳು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಆಘಾತಕಾರಿ, ರಾಜ್ಯದ ಹೆಮ್ಮೆಯ ಸಂಕೇತ ವಿಜಯನಗರ ಸಾಮ್ರಾಜ್ಯದ ದೊರೆಯಾಗಿದ್ದ ಶ್ರೀಕೃಷ್ಣದೇವರಾಯನ ರಾಜ ಗುರುಗಳಾಗಿದ್ದ ವ್ಯಾಸರಾಜರ ವೃಂದಾವನವನ್ನು ರಕ್ಷಣೆ ಮಾಡುವುದು ಸರ್ಕಾರದ ಹೊಣೆಯಾಗಿದೆ. ರಾಘವೇಂದ್ರ ಸ್ವಾಮೀಜಿಗಳ ಪೂರ್ವ ಅವ್ತಾರ ಎಂದು ಭಾವಿಸುವ ವ್ಯಾಸರಾಯರ ವೃಂದಾವನಕ್ಕೆ ಹಾನಿಯಾಗಿರುವ ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರ ತೀರ್ಥರು ಸಹ ವ್ಯಾಸರಾಯರ ವೃಂದಾವನ ದ್ವಂಸ ಘಟನೆಯನ್ನು ಖಂಡಿಸಿದ್ದು ವ್ಯಾಸರಾಯರು ಕನ್ನಡ ದಾಸ ಸಾಹಿತ್ಯಕ್ಕೆ ಅಪೂರ್ವ ಕೊಡುಗೆ ನೀಡಿದವರು, ಅವರ ವೃಂದಾವನ ಧ್ವಂಸಗೊಳಿಸಿದವರಿಗೆ ಸೂಕ್ತ ಶಿಕ್ಷೆಯಾಗಲಿ ಎಂದಿದ್ದಾರೆ.


 
Top