मनोरंजन

Blog single photo

ನಿನ್ನ ಸನಿಹಕೆ ಚಿತ್ರದಲ್ಲಿ ರಾಜ್ ಮೊಮ್ಮಗಳು ಧನ್ಯಾ ರಾಮ್ ಕುಮಾರ್

18/07/2019


ಬೆಂಗಳೂರು, ಜು.18 (ಹಿ.ಸ) -  ವರನಟ ಡಾ.ರಾಜಕುಮಾರ್‌ ಮೊಮ್ಮಗಳು, ನಟ ರಾಮ್‌ಕುಮಾರ್‌  ಪುತ್ರಿ ಧನ್ಯಾರಾಮ್‌ಕುಮಾರ್‌ ಸೂರಜ್‌ ಗೌಡರ ಚಿತ್ರಕ್ಕೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಫೋಟೋಶೂಟ್‌ ಕೂಡಾ ನಡೆದಿದೆ. 
ಈ ಚಿತ್ರಕ್ಕೆ “ನಿನ್ನ ಸನಿಹಕೆ’ ಎಂದು ಟೈಟಲ್‌ ಇಡಲಾಗಿದೆ. ಆ ಚಿತ್ರವನ್ನು ಸುಮನ್‌ ಜಾದುಗಾರ್‌ ನಿರ್ದೇಶಿಸುತ್ತಿದ್ದಾರೆ. “ನಿನ್ನ ಸನಿಹಕೆ’ ಚಿತ್ರಕ್ಕೆ ಆಗಸ್ಟ್‌ನಲ್ಲಿ ಚಾಲನೆ ಸಿಗಲಿದೆ.  ಆರಂಭಕ್ಕೆ ಹೊಸ ಚಿತ್ರ ಒಪ್ಪಿಕೊಂಡ ಬಗ್ಗೆ ಸೂರಜ್‌ಗೌಡ ಹೇಳಿದ್ದಾರೆ.  ಈ ಹಿಂದೆ  ಸಿಲಿಕಾನ್‌ ಸಿಟಿ ಚಿತ್ರವನ್ನು ನಿರ್ದೇಶಿಸಿದ್ದ ಮುರಳಿ ಗುರಪ್ಪ ಅವರೊಂದಿಗೆ ಮತ್ತೂಂದು ಹೊಸ ಚಿತ್ರದಲ್ಲಿ ನಟಿಸುತ್ತಿದ್ದೇನೆ.
ಸದ್ಯಕ್ಕೆ ಆ ಚಿತ್ರದ ಬಗ್ಗೆ ಈಗಷ್ಟೇ ತಯಾರಿ ನಡೆಯುತ್ತಿದೆ. ಇನ್ನು, ಸಿಲಿಕಾನ್‌ ಸಿಟಿ ಚಿತ್ರವನ್ನು ನಿರ್ಮಾಣ ಮಾಡಿದ್ದ ನಿರ್ಮಾಪಕರೇ ಮುರಳಿ ಗುರಪ್ಪ ನಿರ್ದೇಶನದ ಚಿತ್ರವನ್ನು ನಿರ್ಮಾಣ ಮಾಡುವ ಸಾಧ್ಯತೆ ಇದೆ. ಅದೊಂದು ಪಕ್ಕಾ ಸ್ವಮೇಕ್‌ ಆಗಿರುತ್ತೆ. ನೈಜ ವಿಷಯವನ್ನು ಇಟ್ಟುಕೊಂಡು ಒಂದು ಕಮರ್ಷಿಯಲ್‌ ಚಿತ್ರದಲ್ಲಿ ಹೇಗೆಲ್ಲಾ ಅದನ್ನು ತೋರಿಸಬಹುದು
ಎಷ್ಟೆಲ್ಲಾ ಮೇಕಿಂಗ್‌ ಮಾಡಬಹುದು ಎಂಬುದರ ಬಗ್ಗೆ ಯೋಜನೆ ನಡೆಯುತ್ತಿದೆ.  ಸುಮನ್‌ ಜಾದುಗಾರ್‌ ನಿರ್ದೇಶನದ ಚಿತ್ರ ಪೂರ್ಣಗೊಳ್ಳುವವರೆಗೂ ಆ ಬಗ್ಗೆ ಹೆಚ್ಚೇನೂ ಸುದ್ದಿಯಿಲ್ಲ. ನಾಯಕಿ ಯಾರು, ತಂತ್ರಜ್ಞರು ಯಾರೆಲ್ಲಾ ಇರುತ್ತಾರೆ ಎಂಬಿತ್ಯಾದಿಗೆ ಉತ್ತರವಿಲ್ಲ ಎಂದಷ್ಟೇ ಸ್ಪಷ್ಟಪಡಿಸುತ್ತಾರೆ ನಾಯಕ ನಟ ಸೂರಜ್‌ಗೌಡ.
ಸೂರಜ್‌ಗೌಡ ಅವರು ಧನ್ಯಾರಾಮ್‌ಕುಮಾರ್‌ ಜೊತೆ ನಟಿಸುತ್ತಿರುವ ಚಿತ್ರದ ಮೇಲೆ ಫೋಕಸ್‌ ಮಾಡಿದ್ದಾರಂತೆ. ಆ ಚಿತ್ರಕ್ಕೆ ಅವರೇ ಕಥೆ ಬರೆದಿರುವುದು. ಅಷ್ಟೇ ಅಲ್ಲ, ಆ ಸಿನಿಮಾಗೆ ಸಹ ನಿರ್ಮಾಪಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ಇನ್ನು, ನಿರ್ದೇಶನ ವಿಭಾಗದಲ್ಲೂ ಕೆಲಸ ಮಾಡುತ್ತಿದ್ದಾರಂತೆ. ಹೀಗಾಗಿ, ತುಸು ಜವಾಬ್ದಾರಿ ಜಾಸ್ತಿ ಇರುವುದರಿಂದ, ಈ ಸಿನಿಮಾ ಮುಗಿಸಿದ ಮೇಲೆ ಬೇರೆ ಸಿನಿಮಾದತ್ತ ಗಮನಹರಿಸುವುದಾಗಿ ಹೇಳುತ್ತಾರೆ ಸೂರಜ್‌ಗೌಡ.


 
Top