मनोरंजन

Blog single photo

ತಾಯಿಯಾಗುವ ಸಂಭ್ರಮದಲ್ಲಿ ಚಿತ್ರನಟಿ ಶೃತಿ ಹರಿಹರನ್

17/07/2019ಬೆಂಗಳೂರು, ಜು.17 (ಹಿ.ಸ) - ಚಿತ್ರನಟಿ ಶೃತಿ ತಾಯಿಯಾಗುವ ಸಂಭ್ರಮದಲ್ಲಿದ್ದಾರೆ. ಗರ್ಭಿಣಿಯಾಗಿರುವ ಶೃತಿ ಹರಿಹರನ್, ಈ ವಿಚಾರವನ್ನು ಖುದ್ದು ಅವರೇ ತಮ್ಮ ಫೇಸ್ ಬುಕ್, ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ನಿನ್ನನ್ನು ನೋಡುವ ಕಾತುರ ನನಗೆ ತಾಳಲಾಗುತ್ತಿಲ್ಲ, ಈ ಸರ್ಕಸ್ ಗೆ ನಿನಗೆ ಸ್ವಾಗತ, ನಿನ್ನನ್ನು ಕಾಣಲು ನಿನ್ನ ತಂದೆ ರಾಮ್ ಕಳಾರಿ ಸಹ ಉತ್ಸುಕರಾಗಿದ್ದಾರೆ ಎಂದು ನಟಿ ಬರೆದುಕೊಂಡಿದ್ದಾರೆ.
ಕನ್ನಡ ಚಿತ್ರ ಹ್ಯಾಪಿ ನ್ಯೂ ಇಯರ್ ಬಳಿಕ ಶ್ರುತಿ ಹರಿಹರನ್-ರಾಮ್ ಅವರ ವಿವಾಹವಾಗಿತ್ತು. ಇಬ್ಬರೂ ಹೆಚ್ಚು ಸದ್ದು ಗದ್ದಲವಿಲ್ಲದೆ ವಿವಾಹವಾಗಿದ್ದು 2017ರ ನವೆಂಬರ್ ನಲ್ಲಿ ಜಾಲ ತಾಣವೊಂದರ ವರದಿ ಮೂಲಕ ಬಹಿರಂಗವಾಗಿತ್ತು.
ಕೇರಳದಲ್ಲಿ ನೃತ್ಯ ಮಾಸ್ಟರ್ ಆಗಿರುವ ರಾಮ್ ಅಲ್ಲಿನ ಪ್ರಸಿದ್ದ ಸಮರ ಕಲೆ ಕಲರಿ ಪಟ್ಟು ಕಲಾವಿದರಾಗಿ ಅಂತರಾಷ್ಟ್ರೀಯ ಮನ್ನಣೆ ಗಿಟ್ಟಿಸಿದ್ದಾರೆ.
ಇನ್ನು ಕಳೆದ ವರ್ಷ ನಟ ಅರ್ಜುನ್ ಸರ್ಜಾ ವಿರುದ್ಧ "ಮೀಟೂ" ಆರೋಪ ಮಾಡಿದ್ದ ವೇಳೆ ಅವರು ಮದುವೆಯಾಗಿರುವ ವಿಚಾರ ಬಹಿರಂಗವಾಗಿತ್ತು.


 
Top