व्यापार

Blog single photo

ಎಸ್ ಬಿಐ ನಿಂದ ಕ್ಲಬ್ ವಿಸ್ತಾರಾ ಕ್ರೆಡಿಟ್ ಕಾರ್ಡ್ ಬಿಡುಗಡೆ

28/11/2019


ನವದೆಹಲಿ, ನ. 28 (ಹಿ.ಸ) - ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ (ಎಸ್‌ಬಿಐ) ಮತ್ತು ಪ್ರಯಾಣಿಕ ಸೇವಾ ಸಂಸ್ಥೆಯ ವಿಸ್ತಾರಾ, ಜಂಟಿಯಾಗಿ ಪ್ರೀಮಿಯಂ ಕೋ-ಬ್ರಾಂಡೆಡ್‌ ಕ್ರೆಡಿಟ್‌ ಕಾರ್ಡ್‌ ಬಿಡುಗಡೆ ಮಾಡಿದ್ದು, ‘ಕ್ಲಬ್‌ ವಿಸ್ತಾರಾ’ ಹೆಸರಿನ ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ ಅನ್ನು ಪರಿಚಯಿಸುತ್ತಿದೆ.
ಈ ಬಗ್ಗೆ ಎರಡು ಕಂಪನಿಗಳು ಪತ್ರಿಕಾ ಪ್ರಕಟಣೆ ನಡೆಸಿದ್ದು, ಈ ಕಾರ್ಡ್‌ ಮಾಡುವ ಬಳಕೆದಾರರು ಉಚಿತ ಟಿಕೆಟ್‌ ರದ್ದತಿ, ವಿಶ್ರಾಂತಿ ಪ್ರವೇಶ ಮತ್ತು ಫ್ಲೈಯರ್‌ ಪಾಯಿಂಟ್‌ಗಳಂತಹ ಪ್ರಯೋಜನಗಳನ್ನು ಪಡೆಯಬಹುದಾಗಿದೆ ಎಂದು ತಿಳಿಸಿದೆ.
ಜೊತೆಗೆ ಪ್ರಯಾಣಿಕರಿಗೆ ವಿಮಾ ರಕ್ಷಣೆ, ವಿಶ್ರಾಂತಿ ಪ್ರವೇಶ, ಆದ್ಯತಾ ಪಾಸ್‌ ಕಾರ್ಯಕ್ರಮಗಳಿಗೆ ಪೂರಕ ಸದಸ್ಯತ್ವ ಸೇರಿದಂತೆ ಇತರೆ ಸೇವೆಗಳು ಈ ಕಾರ್ಡ್‌ ಅಡಿಯಲ್ಲಿ ಲಭ್ಯವಿದ್ದು, ಕ್ಲಬ್‌ ವಿಸ್ತಾರಾ ಎಸ್‌ಬಿಐ ಕಾರ್ಡ್‌ ಕ್ಲಬ್‌ ವಿಸ್ತಾರಾ ಸಿಲ್ವರ್‌/ ಬೇಸ್‌ ಟಯರ್‌ ಸದಸ್ಯತ್ವ ಎಂಬ ಎರಡು ಮಾದರಿಗಳಲ್ಲಿ ಸಿಗಲಿದೆ. ಎಸ್‌ಬಿಐ ವಿಸ್ತಾರಾ ಕಾರ್ಡ್‌ ಬಳಸಿಕೊಂಡು ವಿಮಾನ ಟಿಕೆಟ್‌ ಕಾಯ್ದಿರಿಸುವವರಿಗೆ ಆಕರ್ಷಕ ರಿಯಾಯಿತಿ ಇದ್ದು, ಸ್ವಾಗತ ಟಿಕೆಟ್‌ಗಳು, ಒನ್‌ ಕ್ಲಾಸ್‌ ಅಪ್‌ಗ್ರೇಡ್‌ ವೋಚರ್‌ ಮತ್ತು ಬುಕಿಂಗ್‌ ಉಚಿತ ರದ್ದತಿ ಅಂತಹ ಸವಲತ್ತುಗಳನ್ನು ಹೊಂದಿದೆ.


 
Top