ट्रेंडिंग

Blog single photo

40 ಸಾವಿರ ಮೌಲ್ಯದ ಒಡವೆ ವಾರಸುದಾರರಿಗೆ ಹಿಂತಿರುಗಿಸಿ, ಪ್ರಾಮಾಣಿಕತೆ ಮೆರೆದ ಬಸ್ ನಿರ್ವಾಹಕ

09/10/2019


ಮಣಿಪಾಲ್, ಅ.09 (ಹಿ.ಸ) - ತಮಗೆ ದೊರೆತ 40 ಸಾವಿರ ಮೌಲ್ಯದ ಒಡವೆಯನ್ನು ಅದರ ವಾರಸುದಾರರಿಗೆ ಮರಳಿಸಿ ಕೆ ಎಸ್ ಆರ್ ಟಿಸಿ ವೋಲ್ವೋ ಬಸ್ ಕಂಡಕ್ಟರ್  ಪ್ರಾಮಾಣಿಕತೆ ಮೆರೆದ ಘಟನೆ ಮಣಿಪಾಲದಲ್ಲಿ ನಡೆದಿದೆ.
ಮಣಿಪಾಲದ ಜಲಜಾಕ್ಷಿ ಅವರು, ಸೋಮವಾರ ಸಂಜೆ 6-30ಕ್ಕೆ ಕೆ.ಎಸ್.ಆರ್.ಟಿ.ಸಿ ವೋಲ್ವೋ ಬಸ್ಸಿನಲ್ಲಿ ಮಂಗಳೂರಿಂದ ಮಣಿಪಾಲಕ್ಕೆ ಮಗಳು ಹಾಗು ಮೊಮ್ಮಗಳೊಂದಿಗೆ ಪ್ರಯಾಣಿಸಿದ್ದರು. 
ಈ ವೇಳೆ ಮಗುವಿನ ಕತ್ತಿನಲ್ಲಿದ್ದ ಸರ ಕಳೆದು ಹೋಗಿತ್ತು. ಮರುದಿನ ಈ ವಿಚಾರ ತಿಳಿದು ಬಸ್ಸಿನ ನಿರ್ವಾಹಕ ಪ್ರಸಾದ್ ಬಳಿ ವಿಚಾರಿಸಿದಾಗ ಸಿಕ್ಕಿದ್ದ 40 ಸಾವಿರ ಬೆಲೆಯ ಚಿನ್ನದ ಸರವನ್ನು ಹಿಂತಿರುಗಿಸಿದ್ದಾರೆ. ನಿರ್ವಾಹಕ  ಪ್ರಸಾದ್ ಅವರ ಈ ಪ್ರಾಮಾಣಿಕ ನಡೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.


 
Top