राज्य

Blog single photo

ಚಿತ್ರದುರ್ಗ ಆಸ್ಪತ್ರೆಯಲ್ಲಿ ಆಕಸ್ಮಿಕ ಬೆಂಕಿ ; ಪರದಾಡಿದ ರೋಗಿಗಳು

04/05/2021

ಚಿತ್ರದುರ್ಗ,ಮೇ 04(ಹಿ.ಸ) : ಕೋಟೆ ನಾಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಆಕಸ್ಮಿಕ ಬೆಂಕಿಯಿಂದ ರೋಗಿಗಳು ಪರದಾಡುವಂತಾಗಿತ್ತು. 


ಸರ್ಕಾರಿ ಆಸ್ಪತ್ರೆಯ ಎರಡನೇ ಮಹಡಿಯಲ್ಲಿರುವ ಐಪಿಪಿ ಬಳಿಯಲ್ಲಿ ವಿದ್ಯುತ್ ಕೇಬಲ್ ದುರಸ್ತಿ ಮಾಡುವಾಗ ಆಕಸ್ಮಿಕವಾಗಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ‌ ಕಾಣಿಸಿಕೊಂಡು ಹಿಗೆ ಆವರಿಸಿದೆ. ಇದರಿಂದ ವಾರ್ಡಿನಲ್ಲಿದ್ದ ರೋಗಿಗಳು ಉಸಿರುಕಟ್ಟುವ ವಾತಾರಣದಲ್ಲಿ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಕೂಡಲೇ ಅವರನ್ನೆಲ್ಲಾ ವಾರ್ಡಿನಿಂದ ಹೊರಗೆ ಕಳುಹಿಸಿ ಬೆಂಕಿ ನಂದಿಸಲಾಯಿತು. ಆದರೆ ಯಾವುದೇ ಪ್ರಾಣಾಪಾಯವಾಗಿಲ್ಲ 

ಹಿಂದೂಸ್ತಾನ್ ಸಮಾಚಾರ್/ಪ್ರಬಿ/ಎಂವೈ


 
Top