खेल

Blog single photo

ಕ್ರಿಕೆಟ್ ಆಟಗಾರ್ತಿ ವೇದಾಕೃಷ್ಣಮೂರ್ತಿ ಸಹೋದರಿ ಕರೋನಗೆ ಬಲಿ

06/05/2021

ಚಿಕ್ಕಮಗಳೂರು,ಮೇ ೦೬(ಹಿ.ಸ):
ರಾಷ್ಟ್ರೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಅವರ ಸಹೋದರಿ ಕರೋನ ಸೋಂಕಿಗೆ ಬಲಿಯಾಗಿದ್ದಾರೆ. 


ವೇದಾ ಕೃಷ್ಣಮೂರ್ತಿ ಅವರ ಸಹೋದರಿ ವತ್ಸಲ ಕೃಷ್ಣಮೂರ್ತಿ (೪೫) ಅವರು ಕರೋನ ಸೋಂಕಿಗೆ ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ತಡ ರಾತ್ರಿ ಕೊನೆಯುಸಿರೆಳೆದರು. 

೧೦ ದಿನಗಳ ಹಿಂದೆ ಕರೋನ ಸೋಂಕಿಗೆ ವೇದಾಕೃಷ್ಣಮೂರ್ತಿ ಅವರ ತಾಯಿ ಚೆಲುವಾಂಬ(೬೫) ಸಹ ಬಲಿಯಾಗಿದ್ದರು.
ಕೆಲವೇ ದಿನಗಳ ಅಂತರದಲ್ಲಿ ತಾಯಿ ಮತ್ತು ಸಹೋದರಿ ಕರೋನ ಸೋಂಕಿಗೆ ಬಲಿಯಾಗಿ ರುವುದು ವೇದಾ ಕೃಷ್ಣಮೂರ್ತಿ ಅವರ ಕುಟುಂಬಕ್ಕೆ ತೀವ್ರ ಆಘಾತ ನೀಡಿದೆ. 

ಹಿಂದೂಸ್ತಾನ್ ಸಮಾಚಾರ್/ಎಸ್.ಕೆ/ಮ.ಯ



 
Top