क्षेत्रीय

Blog single photo

ಜುಲೈ 17 ರಿಂದ 22 ವರೆಗೆ ನಡೆಯಲಿದೆ ಭಾರತೀಯ ವಾಯುಪಡೆಗೆ ನೇಮಕಾತಿ

17/07/2019


ಶಿವಮೊಗ್ಗ, ಜು.17 (ಹಿ.ಸ) -  ಭಾರತೀಯ ವಾಯುಸೇನೆಗೆ ನೇಮಕಾತಿ ಪ್ರಕ್ರಿಯೆ ಇಂದಿನಿಂದ ಪ್ರಾರಂಭವಾಗಿದೆ.  ಸ್ಥಳೀಯ ನೆಹರೂ ಕ್ರೀಡಾಂಗಣದಲ್ಲಿ ಆರಂಭವಾದ ರ‍್ಯಾಲಿ ಜುಲೈ 22ರವರೆಗೆ ನಡೆಯಲಿದೆ. ಮೊದಲ ದಿನದಂದು ಇಡೀ ಕ್ರೀಡಾಂಗಣವು ಅಭ್ಯರ್ಥಿಗಳಿಂದ ತುಂಬಿಹೋಗಿದೆ.  ಜಿಲ್ಲಾಡಳಿತ, ಮಹಾನಗರಪಾಲಿಕೆ ಆಶ್ರಯದಲ್ಲಿ ಸೈನಿಕ ಕಲ್ಯಾಣ ಮತ್ತು ಪುನವರ್ವಸತಿ ಇಲಾಖೆವತಿಯಿಂದ ಈ ನೇಮಕಾತಿ ಉತ್ಸವ ನಡೆಯುತ್ತಿದೆ. ಒಕ್ಕಲಿಗರ ಸಮುದಾಯ ಭವನ ಮತ್ತು ಕೆಇಬಿ ಸಮುದಾಯ ಭವನದಲ್ಲಿ ಅಭ್ಯರ್ಥಿಗಳಿಗೆ ವ್ಯವಸ್ಥೆ ಮಾಡಲಾಗಿದೆ.
ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಅಭ್ಯರ್ಥಿಗಳಿಗೆ ಇವತ್ತು ಅವಕಾಶ ನೀಡಲಾಗಿದೆ. ಐಎಎಫ್​ಪಿ ಮತ್ತು ಆಟೋಮೊಬೈಲ್ ತಂತ್ರಜ್ಞರ ಗ್ರೂಪ್​ಗೆ ದೈಹಿಕ ಪರೀಕ್ಷೆ (ಪಿಎಫ್​ಟಿ) ಮತ್ತು ಲಿಖಿತ ಪರೀಕ್ಷೆ ಇಂದು ನಡೆಯಲಿದೆ. 
ಜುಲೈ 18 ರಂದು ಎಟಿ1 ಮತ್ತು ಎಟಿ2 ಪರೀಕ್ಷೆ ನಡೆಯಲಿದೆ. (ಎಟಿ (AT) ಅಂದರೆ ಅಡಾಪ್ಟಬಿಲಿಟಿ ಟೆಸ್ಟ್.)
ಜುಲೈ 19 ಮತ್ತು 20 ರಂದು ರಾಜ್ಯದ ಎಲ್ಲಾ 30 ಜಿಲ್ಲೆಗಳ ವೈದ್ಯಕೀಯ ಸಹಾಯಕ ಅಭ್ಯರ್ಥಿಗಳಿಗೆ ಪಿಎಫ್​ಟಿ ಮತ್ತು ಲಿಖಿತ ಪರೀಕ್ಷೆ ನಡೆಯಲಿದೆ. 
ಜು. 21ಮತ್ತು 22 ರಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ,ರಾಮನಗರ, ಕೋಲಾರ, ಮಂಡ್ಯ, ಚಿಕ್ಕಬಳ್ಳಾಪುರ, ಚಾಮರಾಜ ನಗರ, ಮಡಿಕೇರಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ತುಮಕೂರು, ಹಾಸನ, ಗದಗ, ಕೊಪ್ಪಳ, ಹಾವೇರಿ, ದಾವಣಗೆರೆ, ಉಡುಪಿ ಜಿಲ್ಲೆಗಳ ಐಎಎಫ್​ಪಿ ಮತ್ತು ಆಟೋಮೊಬೈಲ್ ತಂತ್ರಜ್ಞರ ಗ್ರೂಪ್​ಗೆ ಪಿಎಫ್​ಟಿ ಮತ್ತು ಲಿಖಿತ ಪರೀಕ್ಷೆ ನಡೆಯಲಿದೆ.


 
Top