मनोरंजन

Blog single photo

ನನ್ನ ಪ್ರಕಾರ ಚಿತ್ರದಲ್ಲಿ ಬೋಲ್ಡ್ ನಟಿಯಾಗಿ ಮಯೂರಿ

14/07/2019

ಬೆಂಗಳೂರು, ಜು.14 (ಹಿ.ಸ) - ಹುಬ್ಬಳ್ಳಿಯಿಂದ ಬಂದ ಹೋಮ್ಲಿ ಹುಡುಗಿ ಎಂಬ ಪಟ್ಟ ಪಡೆದಿದ್ದ ಮಯೂರಿ ಈಗ ಸಖತ್‌ ಬೋಲ್ಡ್‌  ಆಗಿದ್ದಾರೆ. ಈ ಹುಡುಗಿ ಇದೀಗ ಮಾಡರ್ನ್ ಹುಡುಗಿಯಾಗಿದ್ದಾರೆ. ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಾ, ಸಿಗರೇಟ್‌, ಹುಕ್ಕಾ ಸೇದುವ ಜೊತೆಗೆ ಮದ್ಯದ ನಶೆಯಲ್ಲಿ ತೇಲುವ ಮಟ್ಟಕ್ಕೆ ತಿರುಗಿದ್ದಾರೆಂದು ಹೇಳಿದರು ನೀವು ಆಶ್ಚರ್ಯಪಡಬಹುದು.
 ನನ್ನ ಪ್ರಕಾರ ಎಂಬ ಸಿನಿಮಾದಲ್ಲಿ ಮಯೂರಿ ನಟಿಸಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮಯೂರಿಗೆ ಈ ಹಿಂದೆ ಮಾಡಿರದ ಪಾತ್ರ ಸಿಕ್ಕಿದ್ದು, ಅದು ಸಖತ್‌ ಬೋಲ್ಡ್‌ ಆದ ಪಾತ್ರವಾಗಿದೆ. 
ಮಯೂರಿ ಕೂಡಾ ಈ ಪಾತ್ರವನ್ನು ಖುಷಿಯಿಂದಲೇ ಮಾಡಿದ್ದಾರೆ. ಈ ಪಾತ್ರದ ಬಗ್ಗೆ ಮಾತನಾಡಿದ ಮಯೂರಿ, ನನ್ನ ಪ್ರಕಾರ ಒಂದು ವಿಶಿಷ್ಟವಾದ ಪಾತ್ರ. ಇದನ್ನು ಮಲ್ಟಿಲೆಯರ್‌ ಸಿನಿಮಾ ಎಂದೂ ಕರೆಯಬಹುದು. ನನ್ನ ಪಾತ್ರ ಕಥೆಯ ಕೇಂದ್ರ  ಬಿಂದು ಎಂದರೆ ತಪ್ಪಲ್ಲ. ನಾನು ಇಲ್ಲಿ ಬೋಲ್ಡ್‌ ಹುಡುಗಿ ಆಗಿ ಕಾಣಿಸಿಕೊಂಡಿದ್ದೇನೆ.
ನನ್ನ ನಿಜ ಜೀವನಕ್ಕೆ ಸಂಪೂರ್ಣವಾಗಿ ವಿರುದ್ಧವಾದ ಪಾತ್ರ ಇದಾಗಿದೆ. ಸ್ವತಂತ್ರ್ಯ  ಹುಡುಗಿಯಾಗಿರುವ ಆಕೆಯದ್ದೇ ಒಂದು ಜೀವನ.  ಪಾರ್ಟಿ, ಪಬ್‌, ಕುಡಿತ … ಇವೆಲ್ಲದಕ್ಕೆ ಅಂಟಿಕೊಂಡಿರುವ ಆಕೆ, ಅದರಿಂದ ಯಾವ ರೀತಿ ತೊಂದರೆ ಅನುಭವಿಸುತ್ತಾಳೆ ಎಂಬುದು ಸಿನಿಮಾದ ಹೈಲೈಟ್‌ ಆಗಿದ್ದು, ಚಿತ್ರದಲ್ಲಿ ಒಳ್ಳೆಯ ಸಂದೇಶವಿದೆ. ಇತ್ತೀಚೆಗಷ್ಟೇ ಚಿತ್ರದ ಮೋಷನ್‌ ಪೋಸ್ಟರ್‌ ಬಿಡುಗಡೆಯಾಗಿದೆ.
ನನ್ನ ಪ್ರಕಾರ ಚಿತ್ರದ ನಿರ್ದೇಶಕ ವಿನಯ್.  ಜಿವಿಕೆ ಕಂಬೈನ್ಸ್‌ ಹಾಗು ಗುರುರಾಜ್‌ ಈ ಚಿತ್ರದ ನಿರ್ಮಾಪಕರು.  ಚಿತ್ರದಲ್ಲಿ ಕಿಶೋರ್‌, ಪ್ರಿಯಾಮಣಿ, ವೈಷ್ಣವಿ, ನಿರಂಜನ್‌ ಸೇರಿದಂತೆ ಅನೇಕರು ನಟಿಸಿದ್ದಾರೆ. 


 
Top