व्यापार

Blog single photo

ಏರ್ ಇಂಡಿಯಾ ಮಾರಾಟ ಸಂಬಂಧ ರೋಡ್ ಶೋ - ಕೇಂದ್ರ ಸರ್ಕಾರ

17/07/2019

ಏರ್ ಇಂಡಿಯಾ ಮಾರಾಟ ಸಂಬಂಧ ರೋಡ್ ಶೋ - ಕೇಂದ್ರ ಸರ್ಕಾರ 
ನವದಹೆಲಿ, ಜು.17 (ಹಿ.ಸ) - ಭಾರಿ ಸಮಸ್ಯೆಯಾಗಿರುವ ಏರ್‌ ಇಂಡಿಯಾ ಮಾರಾಟ ಮಾಡುವ ಸಂಬಂಧ ರೋಡ್‌ ಶೋ ನಡೆಸಲು ತೀರ್ಮಾನಿಸಲಾಗಿದೆ.  ಮುಂದಿನ ತಿಂಗಳಿನಿಂದ ಅದು ನಡೆಯಲಿದ್ದು, ವರ್ಷಾಂತ್ಯದಲ್ಲಿ ಷೇರುಗಳ ಮಾರಾಟ ಪ್ರಕ್ರಿಯೆ ಮುಕ್ತಾಯವಾಗಬೇಕು ಎಂದು ಸರಕಾರ ಗುರಿ ಹಾಕಿಕೊಂಡಿದೆ. ರೋಡ್‌ ಶೋ ನಡೆಸುವುದರ ಜೊತೆಗೆ ಮುಕ್ತವಾಗಿ ಖರೀದಿದಾರರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದೆ.  ಮಹತ್ವದ ಬದಲಾವಣೆ ಎಂದರೆ ಬಿಡ್‌ ಮಾಡುವವರು ನಿಯಮಗಳಲ್ಲಿ ಬದಲಾವಣೆ ಬಯಸಿದಲ್ಲಿ ಅದಕ್ಕೆ ಸರಕಾರ ಸ್ಪಂದಿಸಲಿದೆ ಎನ್ನಲಾಗಿದೆ.  ಆದರೆ, ಈ ಬಗ್ಗೆ ವಿತ್ತ ಸಚಿವಾಲಯದ ವಕ್ತಾರ ಡಿ.ಎಸ್‌.ಮಲಿಕ್‌, ಏರ್‌ ಇಂಡಿಯಾದ ವಕ್ತಾರ ಧನಂಜಯ ಕುಮಾರ್‌ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.  


 
Top