मनोरंजन

Blog single photo

ರಕ್ಷಿತ್ ಶೆಟ್ಟಿ ಚಿತ್ರಗಳಲ್ಲಿ ನನಗೊಂದು ಪಾತ್ರ ಖಾಯಂ - ರಿಷಭ್ ಶೆಟ್ಟಿ

29/11/2019


ಬೆಂಗಳೂರು, ನ.29 (ಹಿ.ಸ) - ರಕ್ಷಿತ್ ಶೆಟ್ಟಿಯ ಎಲ್ಲಾ ಚಿತ್ರಗಳಲ್ಲೂ ನನಗೊಂದು ಪಾತ್ರ ಇರಲೇಬೇಕು ಎಂದು ಖ್ಯಾತ ನಟ-ನಿರ್ದೇಶಕ ರಿಷಭ ಶೆಟ್ಟಿ ಹೇಳಿದ್ದಾರೆ. ರಕ್ಷಿತ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ಚಿತ್ರ ಅವನೇ ಶ್ರೀಮನ್ನಾರಾಯಣ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಕ್ಷಿತ್ ಶೆಟ್ಟಿಯ ಎಲ್ಲಾ ಚಿತ್ರಗಳಲ್ಲೂ ತಮಗೊಂದು ಪಾತ್ರ ಇರಲೇಬೇಕು ಎಂದರು. ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ನನಗೂ ಒಂದು ಪಾತ್ರ ಬೇಕೆಂದು ಕೇಳಿದ್ದೆ. ರಕ್ಷಿತ್ ಶೆಟ್ಟಿ ಭೇಟಿಯಾದಾಗಲೆಲ್ಲಾ ಚಿತ್ರೀಕರಣದ ಪ್ರಗತಿಯ ಬಗ್ಗೆ ತಿಳಿಸುತ್ತಿದ್ದರು. ಈ ವೇಳೆಯಲ್ಲಿ ನನ್ನ ಪಾತ್ರದ ಬಗ್ಗೆಯೂ ಹೇಳುತ್ತಾರೇನೋ ಎಂದು ಕಾತರದಿಂದ ಕಾಯುತ್ತಿದ್ದೆ. ಕೊನೆಗೂ ನನ್ನ ಪಾತ್ರದ ಬಗ್ಗೆ ಗೊತ್ತಾಯಿತು. ಇನ್ನು ಮುಂದೆಯೂ ಅಷ್ಟೇ ಅವರ ಎಲ್ಲ ಚಿತ್ರಗಳಲ್ಲೂ ನನಗೊಂದು ಪಾತ್ರ ಇರಲೇಬೇಕು ಎಂಬ ಪ್ರೀತಿಪೂರ್ವಕ ಒತ್ತಾಯವನ್ನು ರಿಷಬ್ ಶೆಟ್ಟಿ ಗೆಳೆಯನ ಮೇಲೆ ಹೇರಿದರು. ಇದೇ ವೇಳೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಕೂಡ, ರಕ್ಷಿತ್ ಶೆಟ್ಟಿಯವರ ಮುಂದಿನ ಎಲ್ಲ ಚಿತ್ರಗಳಿಗೂ ನಾನೇ ನಿರ್ಮಾಪಕ ಎಂದು ಹೇಳಿದರು. 
ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ’ಅವನೇ ಶ್ರೀಮನ್ನಾರಾಯಣ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.  ಪ್ಯಾನ್‌ಇಂಡಿಯಾ ಚಿತ್ರಕ್ಕೆ ಕೋಟಿಗಟ್ಟಲೆ ಬಂಡವಾಳ ಹೂಡಿರುವ ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗು ಪ್ರಕಾಶ್ ಎಚ್ ಕೆ ಅವರ ’ಅವನೇ ಶ್ರೀಮನ್ನಾರಾಯಣ’ ಗೆಲ್ಲುವ ಆತ್ಮವಿಶ್ವಾಸದಲ್ಲಿದ್ದಾರೆ. ಕನ್ನಡ ಮತ್ತು ಹಿಂದಿ ಭಾಷೆಯ ಚಿತ್ರಗಳಿಗೆ ಸ್ವತಃ ರಕ್ಷಿತ್ ಶೆಟ್ಟಿ ಡಬ್ ಮಾಡಿದ್ದಾರೆ. 


 
Top