भारत

Blog single photo

ಗೋ ಮೂತ್ರ ಸೇವನೆಯಿಂದ ಕೊರೊನಾ ಬರಲ್ಲ : ಪ್ರಗ್ಯಾ ಠಾಕೂರ್

17/05/2021

ಭೋಪಾಲ್, ಮೇ 17 : "ಪ್ರತನಿತ್ಯ ಗೋ ಮೂತ್ರ ಕುಡಿಯುವುದರಿಂದ ಕೊರೊನಾ ಬರುವುದಿಲ್ಲ‌ ನಾನೂ ಕೂಡ ಸೇವನೆ ಮಾಡುತ್ತಿದ್ದೇನೆ. ಇದರಿಂದ ನನಗೆ ಕೋವಿಡ್ ಬಂದಿಲ್ಲ .."

ಹೀಗಂತ ಸದಾ ಒಂದಿಲ್ಲೊಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುವ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಹೇಳಿದ್ದಾರೆ.

ಹಸುವಿನ ಗೋಮೂತ್ರದಲ್ಲಿ ರೋಗನಿರೋಧಕ ಶಕ್ತಿಯಿದೆ ಈ ಕಾರಣಕ್ಕಾಗಿ ನಾನು ಪ್ರತಿದಿನ ಗೋಮೂತ್ರವನ್ನು ಸೇರಿಸುತ್ತೇನೆ ಇದರಿಂದ ಯಾವುದೇ ರೋಗ ಬರುವುದಿಲ್ಲ ಎಂದು ಅವರು ಹೇಳಿದ್ದಾರೆ.

ನೀವು ಪ್ರತಿದಿನ ದೇಶಿ ಹಸುವಿನ ಗೋಮೂತ್ರವನ್ನು ಸೇವಿಸುವುದರಿಂದ ಕೊರೊನಾ ಸೋಂಕು ಬರುವುದಿಲ್ಲ.ಗೋಮೂತ್ರ ಕುಡಿಯಲು ಸ್ವಲ್ಪ ನೋವಾಗುತ್ತದೆ ಆದರೂ ಪ್ರತಿದಿನ ಅದನ್ನು ಕುಡಿಯುತ್ತೇನೆ ಈಗಾಗಿ ಪರವಾಗಿಲ್ಲ ಎಂದು ಅವರು ತಿಳಿಸಿದ್ದಾರೆ

ಸಾಧ್ವಿ ಎಂದು ಕರೆದುಕೊಳ್ಳುವ ಬಿಜೆಪಿಯ ಸಂಸದೆ ಪ್ರಜ್ಞಾಸಿಂಗ್ ಠಾಕೂರ್ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಕಳೆದ ವರ್ಷ ಡಿಸೆಂಬರ್ ನಲ್ಲಿ ಕೊರೋನೋ ಸೋಂಕಿನ ಲಕ್ಷಣ ದಿಂದಾಗಿ ದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಗೆ ದಾಖಲಾಗಿ ಪ್ರಗ್ಯಾ ಸಿಂಗ್ ಠಾಕೂರ್ ಚಿಕಿತ್ಸೆ ಪಡೆದಿದ್ದಾರೆ

ಉತ್ತರ ಪ್ರದೇಶದ ಬಿಜೆಪಿಯ ಮತ್ತೊಬ್ಬ ಶಾಸಕ‌ ಗೋಮೂತ್ರ ಕುಡಿಯುವುದರಿಂದ ಕೋರೋನಾ ಬರುವುದಿಲ್ಲ ಎಂದು ಹೇಳಿದ್ದರು ಇದೀಗ ಮತ್ತೊಬ್ಬ ಸಂಸದೆ ಇದೆ ಹೇಳಿಕೆ ನೀಡಿದ್ದಾರೆ

ಕೋವಿಡ್ ತಡೆಯುವ ಶಕ್ತಿ ಇಲ್ಲ : ಈ ಕುರಿತು ಪ್ರತಿಕ್ರಿಯಿಸಿರುವ ಭಾರತೀಯ ವೈದ್ಯಕೀಯ ಸಂಘದ ಹಸುವಿನ ಮೂತ್ರದಲ್ಲಿ ಕೊರೋನೋ ಸೋಂಕಿನ ಲಕ್ಷಣಗಳನ್ನು ತಡೆಯುವ ಯಾವುದೇ ವೈಜ್ಞಾನಿಕ ಅಂಶಗಳು ದೃಢಪಟ್ಟಿಲ್ಲ ಎಂದು ಸ್ಪಷ್ಟಪಡಿಸಿದೆ.

ಐಎಂಎ ಅಧ್ಯಕ್ಷ ಡಾ.ಜೆ.ಎ ಜಯಲಾಲ್ ,ಗೋ ಮೂತ್ರದಲ್ಲಿ ಯಾವುದೇ ವೈಜ್ಞಾನಿಕ ಅಂಶಗಳಿಲ್ಲ ಎಂದು ಹೇಳಿದ್ದಾರೆ.


 
Top