मनोरंजन

Blog single photo

ನಟಿ ಕಂಗನಾ ಕಿರಿಕಿರಿ: ಟ್ವಿಟ್ಟರ್ ಖಾತೆ ಕಾಯಂ ಡಿಲೀಟ್

04/05/2021

ಮುಂಬೈ,ಮೇ 4 : ಸದಾ ಒಂದಿಲ್ಲೊಂದು ವಿವಾದವನ್ನು ಮೈ ಮೇಲೆ ಎಳೆದುಕೊಳ್ಳುವ ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಟ್ವಿಟ್ಟರ್ ಖಾತೆಯನ್ನು ವಿವಾದಾತ್ಮಕ ಟ್ವೀಟ್ ಹಿನ್ನೆಲೆಯಲ್ಲಿ ‌ ಟ್ವಿಟ್ಟರ್ ಸಂಸ್ಥೆ ಡಿಲೀಟ್ ಮಾಡಿದೆ.

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ನಂತರ ಅಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದ ಕಿಡಿ ಹೊತ್ತಸಿದ್ದರು. ಟ್ವಿಟ್ಟರ್‌ ನಿಯಮದ ಪ್ರಕರಣ ವೈಯಕ್ತಿಕ ಟೀಕೆ,ನಿಂದನೆ ಮಾಡಿದರೆ ಅಂತ ಖಾತೆ ರದ್ದು ಮಾಡಲಾಗುತ್ತಿದೆ.ಇದೀಗ ಕಂಗನಾ ರಣಾವತ್ ಖಾತೆ ರದ್ದು ಮಾಡಲಾಗಿದೆ.

ಸಾಮಾಜಿಕ ‌ತಾಣದಲ್ಲಿ ಪದೇ ಪದೇ ವಿವಾದಾತ್ಮಕ ಬರಹ ಪ್ರಕಟಿಸುತ್ತಿದ್ದರು.‌ನಿಯಮ‌ ಉಲ್ಲಂಘನೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಕಂಗನಾ ಗುಡುಗು : ಟ್ವಿಟ್ಟರ್ ಖಾತೆಯಿಂದ ಕಾಯಂ ಆಗಿ ರದ್ದು ಮಾಡಿದ‌ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ನಟಿ ಕಂಗನಾ, ನಾನು ಧ್ವನಿ ಹತ್ತಿಕ್ಕಲು ಸಾದ್ಯವಿಲ್ಲ‌.ಈ ವೇದಿಕೆ ಅಲ್ಲದಿದ್ದರೆ ಮತ್ತೊಂದು ವೇದಿಕೆ ಬಳಸಿಕೊಳ್ಳತ್ತೇನೆ ಎಂದು ಗುಡುಗಿದ್ದಾರೆ.

ಸಿನಿಮಾ ಮೂಲಕವೂ ತಾವು ಏನು ಹೇಳಬೇಕು ಅನ್ನುವುದನ್ನು ಹೇಳುತ್ತೇನೆ ಅದನ್ನು ತಡೆಯಲು ಯಾರಿಂದಲೂ ಸಾದ್ಯವಿಲ್ಲ ಎಂದಿದ್ದಾರೆ.

ಹಲವರ ಖಾತೆ ರದ್ದು: ವಿವಾದಾತ್ಮಕ ಪೋಸ್ಟ್‌ ಮಾಡುವ ಅನೇಕ ಸೆಲೆಬ್ರಿಟಿಗಳು ಮತ್ತು ರಾಜಕೀಯ ನಾಯಕರು‌ ಖಾತೆಯನ್ನು ಟ್ವಿಟ್ಟರ್ ಸಂಸ್ಥೆ ಬಂದ್ ಮಾಡಿದೆ.


 
Top