खेल

Blog single photo

ತಂಡದ ಕೋಚ್ ಆಯ್ಕೆಯಲ್ಲಿ ಸ್ಥಳೀಯರಿಗೆ ಅವಕಾಶ ನೀಡಿ - ರಾಹುಲ್ ದ್ರಾವಿಡ್

29/11/2019


ಬೆಂಗಳೂರು, ನ.29 (ಹಿ.ಸ) - ರಂಗು ರಂಗಿನ ಐಪಿಎಲ್ ಲೀಗ್ ಹತ್ತಿರಕ್ಕೆ ಬಂತು. ಫ್ರಾಂಚೈಸಿಗಳು ತಂಡ ಕಟ್ಟುವಲ್ಲಿ ನಿರತವಾಗಿವೆ.  ಕನ್ನಡಿಗ ರಾಹುಲ್ ದ್ರಾವಿಡ್ ಐಪಿಎಲ್ ನ ತಂಡಗಳಿಗೆ ಗೆಲುವಿನ ಮಂತ್ರ ಹೇಳಿಕೊಟ್ಟಿದ್ದಾರೆ.  ಐಪಿಎಲ್ ತಂಡಗಳು ತಂಡಕ್ಕೆ ತರಬೇತುದಾರರನ್ನು (ಕೋಚ್) ಆಯ್ಕೆ ಮಾಡುವಾಗ ಭಾರತೀಯರಿಗೆ ಅವಕಾಶ ನೀಡಬೇಕು. ಭಾರತೀಯರಿಗೆ ಸ್ಥಳೀಯ ಪ್ರತಿಭೆಗಳ ಬಗ್ಗೆ ಹೆಚ್ಚು ಪರಿಚಯವಿರುತ್ತದೆ ಎಂದು ದ್ರಾವಿಡ್ ಹೇಳಿದ್ದಾರೆ. ಮುಖ್ಯ ಕೋಚ್ ಅಲ್ಲದಿದ್ದರೆ ಸಹಾಯಕ ಕೋಚ್ ಆದರೂ ಭಾರತೀಯರಿರಬೇಕು. ಕೂಟದಲ್ಲಿ ಹೆಚ್ಚು ಭಾರತೀಯ ಆಟಗಾರರು ಆಡುವುರಿಂದ ಸ್ಥಳೀಯ ಕೋಚ್ ಗಳು ಈ ಆಟಗಾರರ ಕೌಶಲದ ಬಗ್ಗೆ ತಿಳಿದಿರುತ್ತಾರೆ. ಅವರಿಗೆ ಅವಕಾಶ ನೀಡಬೇಕಿದೆ ಎಂದು ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.


 
Top